ಬೆಂಗಳೂರು (ಅ.11): ಪೌರಕಾರ್ಮಿಕರ ವಿದೇಶಕ್ಕೆ‌ ಕಳುಹಿಸುವ ತೀರ್ಮಾನ ಮಾಡಿದ ಮೊದಲ ಸರ್ಕಾರ ನಮ್ಮದು.  ಹಿಂದೆ ಯಾವ ಸರ್ಕಾರಗಳೂ ಪೌರಕಾರ್ಮಿಕರ ವಿದೇಶಕ್ಕೆ ಕಳುಹಿಸಿಲ್ಲ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನೀವೆಲ್ಲ ಕನಸು ಕಾಣದೇ ಸಿಂಗಾಪುರ್ ಪ್ರವಾಸ ಮಾಡ್ತಿದ್ದೀರಿ? ಯಾರಾದರೂ ಕನಸು ಕಂಡಿದ್ದಿರಾ?ಬೇರೆ ಯಾರಾದ್ರೂ ನಿಮ್ಮನ್ನು ಕಳುಹಿಸಿದ್ದಾರಾ?  ಅಂತ ಪೌರ ಕಾರ್ಮಿಕರ ಸಿಎಂ ಪ್ರಶ್ನಿಸಿದ್ದಾರೆ.  ಸಿಎಂ ಪ್ರಶ್ನೆಗೆ ಉತ್ಸುಕತೆಯಿಂದ ಪೌರಕಾರ್ಮಿಕರು  ಇಲ್ಲ ಎಂದಿದ್ದಾರೆ.   ಈಗ  ಬಿಬಿಎಂಪಿ  ಪೌರಕಾರ್ಮಿಕರ  6ನೇ  ತಂಡ  ಸಿಂಗಾಪುರ ಪ್ರವಾಸ ಕೈಗೊಳ್ಳಲಿದೆ. ಅ. 24ರಂದು ಪೌರ ಕಾರ್ಮಿಕರು ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ಘನ ತ್ಯಾಜ್ಯ ನಿರ್ವಹಣೆಯ ವಿವಿಧ ವಿಧಾನಗಳ ಬಗ್ಗೆ ಅಧ್ಯಯನಕ್ಕೆ  ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸ ಹೋಗುತ್ತಿದ್ದಾರೆ.  ಅ. 24ರಿಂದ ನಾಲ್ಕು ದಿನಗಳ ಕಾಲ 39 ಪೌರಕಾರ್ಮಿಕರು, ಮೂವರು ಅಧಿಕಾರಿಗಳು  ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಅವರಿಗೆ ಇಂದು  ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ  ಬೀಳ್ಕೊಡುಗೆ ನೀಡಿದ್ದಾರೆ. 

(ಸಾಂದರ್ಭಿಕ ಚಿತ್ರ)