ಇಂದು ಗೌರಿ ಹಬ್ಬ. ನಾಳೆ ಗಣೇಶ ಚಥುರ್ತಿ. ಜನ ಹಬ್ಬಕ್ಕೆ ಅದ್ದೂರಿಯಾಗೇ ತಯಾರಿ ಮಾಡ್ಕೊಂಡಿದ್ದಾರೆ. ಹಾಗೇನೆ ಇತ್ತ ಪಾಲಿಕೆ ಕೂಡ ಹಬ್ಬಕ್ಕೆ ಒಂದಿಷ್ಟು ನಿಯಮಗಳನ್ನ ರೂಪಿಸಿದೆ. ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಪಾಲಿಕೆ ರೂಪಿಸಿರೋ ನಿಯಮಳೇನು? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು(ಆ.24): ಇಂದು ಗೌರಿ ಹಬ್ಬ. ನಾಳೆ ಗಣೇಶ ಚಥುರ್ತಿ. ಜನ ಹಬ್ಬಕ್ಕೆ ಅದ್ದೂರಿಯಾಗೇ ತಯಾರಿ ಮಾಡ್ಕೊಂಡಿದ್ದಾರೆ. ಹಾಗೇನೆ ಇತ್ತ ಪಾಲಿಕೆ ಕೂಡ ಹಬ್ಬಕ್ಕೆ ಒಂದಿಷ್ಟು ನಿಯಮಗಳನ್ನ ರೂಪಿಸಿದೆ. ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಪಾಲಿಕೆ ರೂಪಿಸಿರೋ ನಿಯಮಳೇನು? ಇಲ್ಲಿದೆ ಸಂಪೂರ್ಣ ವಿವರ

ನಿಯಮಗಳಪಾಲನೆಕಡ್ಡಾಯ!

-ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

-ಪ್ಲಾಸ್ಟಿಕ್, ಬ್ಯಾನರ್​ಗಳನ್ನು ಬಳಸುವಂತಿಲ್ಲ

-ರಾತ್ರಿ 10.30ರ ನಂತರ ಧ್ವನಿವರ್ಧಕ, ಪಟಾಕಿಗೆ ನಿಷೇಧ

-ನಿಗದಿಪಡಿಸಿದ ಸ್ಥಳಗಳಲ್ಲೇ ಗಣೇಶ ವಿಸರ್ಜನೆ

-ವಿಸರ್ಜನೆ ವೇಳೆ ಹಸಿಕಸ, ಒಣ ಕಸ ವಿಂಗಡಿಸಬೇಕು

ಗಣೇಶವಿಸರ್ಜನಗೆಎಲ್ಲೆಲ್ಲಿಅವಕಾಶ?

-ಹಲಸೂರು, ಸ್ಯಾಂಕಿ, ಯಡಿಯೂರು, ಹೆಬ್ಬಾಳ,

-ಸಾರಕ್ಕಿ ಕೆರೆ ಸೇರಿದಂತೆ 36 ಕೆರೆಗಳಲ್ಲಿ ಅವಕಾಶ

-ಮಾಲಿನ್ಯ ಮಂಡಳಿಯಿಂದ 40 ಮೊಬೈಲ್ ಟ್ಯಾಂಕರ್ ವ್ಯವಸ್ಥೆ

-ಬಿಬಿಎಂಪಿ ಕಡೆಯಿಂದ 250 ಮೊಬೈಲ್ ಟ್ಯಾಂಕರ್

ಆದಷ್ಟು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿ ಎಂದು ಜನ ಜಾಗೃತಿ ಮೂಡಿಸಿದ್ರೂ. ಪಿಒಪಿ ಗಣೇಶ ಬಳಕೆಗೆ ಕಡಿವಾಣ ಬಿದ್ದಿಲ್ಲ. ಹೀಗಘಾಇ ಈ ಬಾರಿ ಪಾಲಿಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು.. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಕರೆ ನೀಡಿದೆ.