Asianet Suvarna News Asianet Suvarna News

ಆಸ್ತಿ ತೆರಿಗೆ ಕಟ್ಟದ ದರ್ಶನ್‌ : ವಿಧಿಸಿದ ದಂಡವೆಷ್ಟು..?

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ನಿಟ್ಟಿನಲ್ಲಿ ನಟ ದರ್ಶನ್ ಗೆ ಬಿಬಿಎಂಪಿ ದಂಡ ವಿಧಿಸಿದೆ.  2017-18ನೇ ಸಾಲಿನ ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ 100 ರು ದಂಡ ವಿಧಿಸಿದೆ. 

BBMP Fine To Sandalwood Star Darshan
Author
Bengaluru, First Published Dec 3, 2018, 8:56 AM IST

 ಬೆಂಗಳೂರು :  ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಬಿಬಿಎಂಪಿ 100 ರು. ದಂಡ ವಿಧಿಸಿದೆ.

ನಟ ದರ್ಶನ್‌ ಅವರು ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯ ತೂಗುದೀಪ ನಿವಾಸದ 2017-18ನೇ ಸಾಲಿನ ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ 100 ರು. ದಂಡ ವಿಧಿಸಿದೆ.

ನಟ ದರ್ಶನ್‌ 2017-18, 2018-19ನೇ ಸಾಲಿನ 12,024 ರು. ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಕಟ್ಟಬೇಕಿತ್ತು. ಆದರೆ ದರ್ಶನ್‌ ತಡವಾಗಿ ಕರ ಪಾವತಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ 2164 ರು. ಬಡ್ಡಿ , 100 ರು. ದಂಡ ವಿಧಿಸಿ, ಒಟ್ಟು 14,889 ರು. ಪಾವತಿ ಮಾಡುವಂತೆ ಸೂಚನೆ ನೀಡಿದೆ.

ಇನ್ನು ಇದೇ ಬಡಾವಣೆಯಲ್ಲಿರುವ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲಿಕತ್ವದ ಬಾಪೂಜಿ ಎಜುಕೇಷನ್‌ ಟ್ರಸ್ಟ್‌ 2018-19ನೇ ಸಾಲಿನ 60,26,304 ಲಕ್ಷ ರು. ಆಸ್ತಿ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

Follow Us:
Download App:
  • android
  • ios