ನಾಳೆ ನಡೆಯಲಿರುವ ಬಿಬಿಎಂಪಿ ಮೇಯರ್ ಅಭ್ಯರ್ಥಿ ಚುನಾವಣೆಗೆ ಭಾರೀ ಕಸರತ್ತು ನಡೆಯುತ್ತಿದೆ. ಮೇಯರ್ ಆಯ್ಕೆ ಚೆಂಡು ಸಿಎಂ ಅಂಗಳಕ್ಕೆ ತಲುಪಿದೆ. ಸಂಪತ್ ರಾಜ್ ಹಾಗೂ ಗೋವಿಂದ್ ರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬೆಂಗಳೂರು (ಸೆ.27): ನಾಳೆ ನಡೆಯಲಿರುವ ಬಿಬಿಎಂಪಿ ಮೇಯರ್ ಅಭ್ಯರ್ಥಿ ಚುನಾವಣೆಗೆ ಭಾರೀ ಕಸರತ್ತು ನಡೆಯುತ್ತಿದೆ. ಮೇಯರ್ ಆಯ್ಕೆ ಚೆಂಡು ಸಿಎಂ ಅಂಗಳಕ್ಕೆ ತಲುಪಿದೆ. ಸಂಪತ್ ರಾಜ್ ಹಾಗೂ ಗೋವಿಂದ್ ರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೆಪಿಸಿಸಿ ಕಚೇರಿಯಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ. ಅಂತಿಮ ಮೇಯರ್ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಅನ್ನು ಭೇಟಿಯಾಗಲಿದ್ದಾರೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಮೇಯರ್ ಅಭ್ಯರ್ಥಿಯನ್ನು ಫೈನಲ್ ಮಾಡಲಿದ್ದಾರೆ. ಗೋವಿಂದರಾಜು,ಸಂಪತ್ ರಾಜ್, ವೇಲುನಾಯಕ್, ಅಂಜನಪ್ಪ ಆಕಾಂಕ್ಷಿಗಳಾಗಿದ್ದಾರೆ.

ಬಿಬಿಎಂಪಿ ನಂಬರ್​​​​ ಗೇಮ್​​​

ಒಟ್ಟು ಮತಗಳು            266

ಮ್ಯಾಜಿಕ್ ನಂಬರ್        134

ಪಕ್ಷಗಳ ಬಲಾಬಲ

ಕಾಂಗ್ರೆಸ್​​                      109

ಜೆಡಿಎಸ್​​                       24

ಬಿಜೆಪಿ                           126

ಪಕ್ಷೇತರರು                   07

ಒಟ್ಟು                           266

ಪಕ್ಷವಾರು ಬಲಾಬಲ (ಕಾಂಗ್ರೆಸ್​​​​)

ಕಾರ್ಪೊರೇಟರ್​ಗಳು                76

ವಿಧಾನಸಭೆ ಸದಸ್ಯರು                13

ಪರಿಷತ್ ಸದಸ್ಯರು                    12

ಲೋಕಸಭಾ ಸದಸ್ಯರು              02

ರಾಜ್ಯಸಭಾ ಸದಸ್ಯರು                06

ಒಟ್ಟು                                  109

ಪಕ್ಷವಾರು ಬಲಾಬಲ (ಜೆಡಿಎಸ್​​)

ಕಾರ್ಪೊರೇಟರ್​ಗಳು                14

ವಿಧಾನಸಭೆ ಸದಸ್ಯರು                03

ಪರಿಷತ್ ಸದಸ್ಯರು                    06

ಲೋಕಸಭಾ ಸದಸ್ಯರು              00

ರಾಜ್ಯಸಭಾ ಸದಸ್ಯರು                01

ಒಟ್ಟು                                       24

ಪಕ್ಷವಾರು ಬಲಾಬಲ (ಬಿಜೆಪಿ)

ಕಾರ್ಪೊರೇಟರ್​ಗಳು                101

ವಿಧಾನಸಭೆ ಸದಸ್ಯರು                12

ಪರಿಷತ್ ಸದಸ್ಯರು                    07

ಲೋಕಸಭಾ ಸದಸ್ಯರು              03

ರಾಜ್ಯಸಭಾ ಸದಸ್ಯರು                02

ಒಟ್ಟು                                       125

ಪಕ್ಷೇತರ ರಾಜ್ಯಸಭಾ ಸದಸ್ಯರು - 01

(ಬಿಜೆಪಿ ಬೆಂಬಲಿಸಬಹುದು)

ಪಕ್ಷೇತರ ಕಾರ್ಪೊರೇಟರ್​ಗಳು - 07

(ಮೈತ್ರಿ ಬೆಂಬಲಿಗರು)

ಕೈ, ತೆನೆಗೆ ಪಕ್ಷೇತರರ ಪವರ್​​​!

ಕಾಂಗ್ರೆಸ್                                  109

ಜೆಡಿಎಸ್                                    24

ಪಕ್ಷೇತರರು                               07

ಒಟ್ಟು                                       140

ಮ್ಯಾಜಿಕ್​ ನಂಬರ್​​                    134