ಬೆಂಗಳೂರು(ಅ.6): ಪಟಾಕಿ ಹೊಡೆಯುವವರಿಗೆ ಈ ಬಾರಿ ಬಿಬಿಎಂಪಿ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಪಾಲಿಕೆ ವ್ಯಾಪ್ತಿಯ ಮನೆಗಳ ಎದುರು ಪಟಾಕಿಗಳನ್ನು ನೀವು ಹೊಡೆಯುವಂತಿಲ್ಲ. ಬಿಬಿಎಂಪಿ ನಿಗದಿತ ಸ್ಥಳಗಳಲ್ಲಿ ಮಾತ್ರ ಪಟಾಕಿ ಸಿಡಿಸುವಂತೆ ಸುತ್ತೋಲೆ ಹೊರಡಿಸುತ್ತಿದೆ. ಇದು ದಕ್ಷಿಣ ಮತ್ತು ಉತ್ತರ ಪಾಲಿಕೆ ವಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಇನ್ನಿತರ ಷರತ್ತುಗಳು

ಮನೆ,ಅರ್ಪಾಟ್ಮೆಂಟ್ ಮುಂದೆ ಪಟಾಕಿ ಸಿಡಿಸುವಂತಿಲ್ಲ. ಹೆಚ್ಚು ಶಬ್ದ ಮಾಡೊ ಪಟಾಕಿ ಸಿಡಿಸುವಂತಿಲ್ಲ. ಕಳೆದ ವರ್ಷ ಯಲಹಂಕ ವಲಯದಲ್ಲಿ ಪ್ರಾಯೋಗಿಕವಾಗಿ ಮಾಡಿ ಯಶಸ್ವಿಯಾಗಿತು. ಈ ಬಾರಿ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಬಿಬಿಎಂಪಿ, ಸಂಚಾರಿ ಪೋಲೀಸರು ಹಾಗೂ ಸ್ವಯಂ ಸೇವೆ ಸಂಘದವರು ಮನೆ ಮುಂದೆ ಪಟಾಕಿ ಸಿಡಿಸದಂತೆ ನಿಮ್ಮ ಮನ ಒಲಿಸಲಿದ್ದಾರೆ. ದಂಡದ ಬಗ್ಗೆ ಕೂಡ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದ್ದಾರೆ.

ನಿಗದಿತ ಸ್ಥಳಗಳ ಪ್ರದೇಶಗಳು

ಬಿಟಿಎಂ ಲೇಔಟ್​,ಪದ್ಮನಾಭನಗರ,ವಿಜಯನಗರ,ಚಿಕ್ಕಪೇಟೆ,ಜಯನಗರ,ಬಸವನಗುಡಿ,ಗಾಳಿ ಆಂಜನೇಯ ದೇವಸ್ಥಾನ, ಜೆಪಿನಗರ

ಬಿಬಿಎಂಪಿಕ್ರಮದಿಂದಆಗುವಪ್ರಯೋಜನಗಳು

ವಾಯು ಮಾಲಿನ್ಯ , ಶಬ್ದ ಮಾಲಿನ್ಯ ನಿಯಂತ್ರಣ

ಧೂಳು ,ಹೊಗೆ ಇಲ್ಲದೇ ಜನರ ಆರೋಗ್ಯ ರಕ್ಷಣೆ

ಕಣ್ಣುಗಳಿಗೆ ಕಿಡಿ ತಗುಲಿ ಹಾನಿ ಪ್ರಮಾಣ ಇಳಿಕೆ

ಪಟಾಕಿ ತ್ಯಾಜ್ಯ ಪ್ರಮಾಣದಲ್ಲೂ ಇಳಿಕೆ