ಬಿಬಿಎಂಪಿ ಬಜೆಟ್ ಮಂಡನೆ: ಮೇಯರ್ , ಆಯುಕ್ತರ ನಿವಾಸ ನಿರ್ಮಾಣಕ್ಕೆ 5 ಕೋಟಿ, ಕಾರ್ಪೊರೇಟರ್'ಗಳ ಗೌರವಧನ 3 ಪಟ್ಟು ಹೆಚ್ಚಳ

First Published 28, Feb 2018, 9:05 PM IST
BBMP budget focuses largely on social welfare
Highlights

ಬಿಬಿಎಂಪಿ ಆರ್ಥಿಕ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್  ಬರೋಬ್ಬರಿ 9,325.53 ಕೋಟಿ ಗಾತ್ರದ ಬಜೆಟ್ ಮಂಡಿಸಿದರು.

ಸಿಲಿಕಾನ್ ಸಿಟಿಯ ಮಂದಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಇಂದು ಮಂಡಿಸಲಾಯಿತು. ಕಳೆದ ವರ್ಷದಂತೆ ಬರೋಬ್ಬರಿ 9 ಸಾವಿರ ಕೋಟಿ ಈ ಬಾರಿ ಇತ್ತು. ಆಡಳಿತ ಪಕ್ಷ ಇದು ಅದ್ಬುತ ಬಜೆಟ್ ಅಂತ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದ್ದರೆ ವಿರೋಧ ಪಕ್ಷ ಇಂಥ ಕೆಟ್ಟ ಬಜೆಟ್'ನಿಂದ ಬೆಂಗಳೂರಿಗೆ ಮೋಸ ಆಗಿದೆ ಟೀಕೆ ವ್ಯಕ್ತಪಡಿಸಿದೆ

ಬಿಬಿಎಂಪಿ ಆರ್ಥಿಕ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್  ಬರೋಬ್ಬರಿ 9,325.53 ಕೋಟಿ ಗಾತ್ರದ ಬಜೆಟ್ ಮಂಡಿಸಿದರು. ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ಬಾರಿ ಬಜೆಟ್ ಬಗ್ಗೆ  ಬೆಂಗಳೂರಿಗರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಹಳೆ ಲೆಕ್ಕ, ಹೊಸ ಪಟ್ಟಿಯಂತಿತ್ತು ಈ ಬಾರಿಯ ಬಜೆಟ್.

 

 ‘ಬೃಹತ್ಲೆಕ್ಕಾಚಾರದ ಹೈಲೆಟ್ಸ್..!

 1. 198 ಸದಸ್ಯರುಗಳಿಗೆ ಟ್ಯಾಬ್ ವಿತರಣೆ
 2. ಮೇಯರ್ , ಆಯುಕ್ತರ ನಿವಾಸ ನಿರ್ಮಾಣಕ್ಕೆ 5 ಕೋಟಿ
 3. ಕಾರ್ಪೊರೇಟರ್ ಗಳ ಗೌರವಧನ 3 ಪಟ್ಟು ಹೆಚ್ಚಳ
 4. 400 ವಿವಿಧ ರಸ್ತೆ, ಪ್ರದೇಶಗಳಲ್ಲಿ ಉಚಿತ ವೈ-ಫೈ
 5. ಇಂದಿರಾ ಕ್ಯಾಂಟೀನ್ ಮೂಲಕ ಪೌರ ಕಾರ್ಮಿಕರಿಗೆ ಬಿಸಿಊಟ
 6. ಒಂಟಿ ಮನೆಗಳ ನಿರ್ಮಾಣ ಯೋಜನೆಗೆ 80 ಕೋಟಿ ಅನುದಾನ
 7. -ಎಸ್​ಟಿ ಸಮುದಾಯದ ಪ್ರದೇಶಾಭಿವೃದ್ಧಿಗೆ 110 ಕೋಟಿ
 8. ಕಲ್ಯಾಣ ಕಾರ್ಯಕ್ರಮಗಳಿಗೆ ಒಟ್ಟೂ 769 ಕೋಟಿ ಮೀಸಲು
 9. ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ 100 ಕೋಟಿ
 10. 40 ಕೆರೆ ಗಳ ನಿರ್ವಹಣೆಗೆ 10 ಕೋಟಿ
 11. 8 ವಲಯಗಳಲ್ಲಿ ಹೆಲಿ ಪ್ಯಾಡ್ ನಿರ್ಮಾಣಕ್ಕೆ 5 ಕೋಟಿ ಅನುದಾನ
 12. 150 ಕಿಮೀ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳ ವೈಟ್ ಟಾಪಿಂಗ್
 13. ಐಟಿಪಿಎಲ್ ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ನಿರ್ಮಾಣ
 14. ಪಾಲಿಕೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ 2 ಕೋಟಿ
 15. ಪಿಂಕ್ ಬೇಬಿ ಕಾರ್ಯಕ್ರಮದ 5 ಲಕ್ಷ ಠೇವಣಿಗಾಗಿ 1.2 ಕೋಟಿ
 16. ಡಯಾಲಿಸಿಸ್ ಕೇಂದ್ರ ನಿರ್ಮಾಣಕ್ಕಾಗಿ 15 ಕೋಟಿ

 

loader