. 1940ರ ಬಳಿಕದ ಅತಿದೊಡ್ಡ ವಿಸ್ತರಣಾ ಯೋಜನೆ ಇದಾಗಿದೆ.
ಮುಂಬೈ(ನ.16): ಭಾರತದ ತೆಲುಗು, ಗುಜರಾತಿ, ಮರಾಠಿ, ಪಂಜಾಬಿ ಸೇರಿದಂತೆ 11 ಭಾಷೆಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುವುದಾಗಿ ಬಿಬಿಸಿ ವರ್ಲ್ಡ್‌ವೈಡ್ ಸರ್ವೀಸ್ ಬುಧವಾರ ಘೋಷಿಸಿದೆ. 1940ರ ಬಳಿಕದ ಅತಿದೊಡ್ಡ ವಿಸ್ತರಣಾ ಯೋಜನೆ ಇದಾಗಿದ್ದು, ರೇಡಿಯೋ, ಮೊಬೈಲ್ ಮತ್ತು ವಿಡಿಯೋ ಕಂಟೆಂಟ್‌ಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುತ್ತದೆ ಎಂದಿದೆ. ಪ್ರಸ್ತುತ ಬಿಬಿಸಿ ಹಿಂದಿ, ಬಂಗಾಲಿ ಮತ್ತು ತಮಿಳು ಭಾಷೆಯಲ್ಲಿ ಸೇವೆ ನೀಡುತ್ತಿದೆ. ಕನ್ನಡ ಭಾಷೆಯಲ್ಲೂ ಶುರು ಮಾಡುವುದರ ಬಗ್ಗೆ ಶೀಘ್ರದಲ್ಲೆ ಮಾಹಿತಿ ಹೊರಬೀಳಲಿದೆ.
