ಈ ಪಟ್ಟಿಯಲ್ಲಿ ಐವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದು, ಇದರಲ್ಲಿ ಕನ್ನಡದ ಸಾಧಕಿಯೊಬ್ಬರಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಚೆನ್ನೈ(ನ.22): ಜಾಗತಿಕ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಬಿಬಿಸಿಯು 2016ನೇ ಸಾಲಿನ ಅತ್ಯಂತ 100 ಪ್ರಭಾವಿ ಮಹಿಳೆಯರನ್ನು ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಐವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದು, ಇದರಲ್ಲಿ ಕನ್ನಡದ ಸಾಧಕಿಯೊಬ್ಬರಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಆ ಸಾಧಕಿ ಮತ್ಯಾರು ಅಲ್ಲ ಹತ್ತಾರು ಕಿ.ಮಿ.ಗಳ ವರೆಗೂ ನೂರಾರು ಸಾಲು ಮರಗಳನ್ನು ಬೆಳಸಿ ರಾಷ್ಟ್ರಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸಿದ ಸಾಲು ಮರದ ತಿಮ್ಮಕ್ಕ. ಸಾಲು ಮರದ ತಿಮ್ಮಕ್ಕನ ಸಾಧನೆಗೆ ಈಗಾಗಲೇ ಹಲವು ರಾಜ್ಯ, ರಾಷ್ಟ್ರೀಯ,ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಬಿಬಿಸಿ ಸುದ್ದಿವಾಹಿನಿ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರನ್ನು ಸೇರಿಸುವುದರೊಂದಿಗೆ ಅಂತರರಾಷ್ಟ್ರೀಯ ಮನ್ನಣೆ ನೀಡಿದೆ.
ಉಳಿದ ನಾಲ್ವರು ಪ್ರಭಾವಿ ಭಾರತೀಯರಲ್ಲಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್, ಟಿಎಎಫ್'ಇ ಸಿಇಒ ಮಲ್ಲಿಕಾ ಶ್ರೀನಿವಾಸನ್, 20 ವರ್ಷದ ಕಂಪ್ಯೂಟರ್ ಇಂಜಿನಿಯರ್ ಗೌರಿ ಚಿಂದ್ರಾಕರ್,34 ವರ್ಷದ ನಟಿ ಹಾಗೂ ಲೇಖಕಿ ನೇಹಾ ಸಿಂಗ್ ಕೂಡ ಇದ್ದಾರೆ. ಇನ್ನುಳಿದ 95 ಮಹಿಳೆಯರನ್ನು ವಿಶ್ವದ ವಿವಿಧ ದೇಶದ ಪ್ರಭಾವಿ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.
