ಮಣಿಪುರದಲ್ಲಿ ಒಟ್ಟು 19,02,562 ಜನ ಮತದಾರರಿದ್ದು, 9,25,573 ಪುರುಷರು ಮತ್ತು 9,73,989 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಲಖನೌ(ಮಾ.04): ಉತ್ತರಪ್ರದೇಶ ಮತ್ತು ಮಣಿಪುರದಲ್ಲಿ ಚುನಾವಣ ಕಣ ರಂಗೇರಿದ್ದು ಇಂದು ಮತದಾನ ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರಪ್ರದೇಶದ 69 ಕ್ಷೇತ್ರಗಳಿಗಿಂದು 6ನೇ ಹಂತದ ಚುನಾವಣೆ ನಡೆಯುತ್ತಿದ್ದರೆ, ಮಣಿಪುರದ 60 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 38 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಇನ್ನು ಉಭಯ ರಾಜ್ಯಗಳಲ್ಲಿ ಇನ್ನೊಂದು ಹಂತದ ಚುನಾವಣೆ ನಡೆಯುವುದು ಬಾಕಿ ಉಳಿಯಲಿದೆ.

ಯುಪಿ ಚುನಾವಣಾ ಕಣದಲ್ಲಿ 636 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ನಿರ್ಧರಿಸಲಿದ್ದಾರೆ. ಹಾಗೆಯೇ ಮಣಿಪುರದಲ್ಲಿ 168 ಮಂದಿ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮಣಿಪುರದಲ್ಲಿ ಒಟ್ಟು 19,02,562 ಜನ ಮತದಾರರಿದ್ದು, 9,25,573 ಪುರುಷರು ಮತ್ತು 9,73,989 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮಣಿಪುರದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.