Asianet Suvarna News Asianet Suvarna News

37 ವರ್ಷದಿಂದ ಈ ಕೊಠಡಿಯಲ್ಲಿದ್ದೇನೆ, ಈಗ ನಿಮಗೆ ಕಾಣಿಸಿತೇ?

ಶಾಸಕರ ಭವನದ ಕೊಠಡಿ ಸಂಖ್ಯೆ 435-436ನ್ನು ತೆರವುಗೊಳಿಸುವಂತೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಬರೆದ ಪತ್ರಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ವಿಧಾನಪರಿಷತ್ತಿನ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ, ಇತರ ಸದಸ್ಯರಿಗೂ ಇದೇ ರೀತಿ ಹೊರಡಿಸಿದ ಆದೇಶದ ಪ್ರತಿ ಒದಗಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಯಾಗಿ ಪತ್ರ ಬರೆದಿದ್ದಾರೆ.

Basvaraja Horatti slams Kolivada

ಬೆಂಗಳೂರು : ಶಾಸಕರ ಭವನದ ಕೊಠಡಿ ಸಂಖ್ಯೆ 435-436ನ್ನು ತೆರವುಗೊಳಿಸುವಂತೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಬರೆದ ಪತ್ರಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ವಿಧಾನಪರಿಷತ್ತಿನ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ, ಇತರ ಸದಸ್ಯರಿಗೂ ಇದೇ ರೀತಿ ಹೊರಡಿಸಿದ ಆದೇಶದ ಪ್ರತಿ ಒದಗಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಯಾಗಿ ಪತ್ರ ಬರೆದಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಿಂದ ಶ್ರೀಪಾದ ಸಾಹುಕಾರ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡುವುದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಆದರೂ ದ್ವೇಷದ ರಾಜಕೀಯ ಮಾಡುತ್ತಿರುವುದು ಅತ್ಯಂತ ನೋವುಂಟು ಮಾಡಿದೆ ಎಂದೂ ಅವರು ತೀಕ್ಷ್ಣಣವಾಗಿ ಹೇಳಿದ್ದಾರೆ.

ಮಂಗಳವಾರ ಪತ್ರ ಬರೆದಿರುವ ಬಸವರಾಜ್‌ ಹೊರಟ್ಟಿ, ಸಭಾಧ್ಯಕ್ಷ ಕೋಳಿವಾಡರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 37 ವರ್ಷಗಳಿಂದ ಅಂದರೆ 1981ರಿಂದ ಶಾಸಕರ ಭವನದ ಕೊಠಡಿ ಸಂಖ್ಯೆ 435-436ರಲ್ಲಿ ನೆಲೆಸಿದ್ದೇನೆ. ಈ ಕೊಠಡಿಗಳು ವಿಧಾನಸಭಾ ಸಚಿವಾಲಯದ ವ್ಯಾಪ್ತಿಗೆ ಬರಲಿದೆ ಎಂಬುದು ಒಮ್ಮಿಂದೊಮ್ಮೆಲೆ ತಮ್ಮ ಗಮನಕ್ಕೆ ಬಂದಿರುವುದು ಆಶ್ಚರ್ಯವಾಗಿದೆ. ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ 15 ಮುಖ್ಯಮಂತ್ರಿಗಳನ್ನು ಮತ್ತು 12 ಸಭಾಧ್ಯಕ್ಷರನ್ನು ಗಮನಿಸಿದ್ದೇನೆ. ಯಾರೂ ಸಹ ವಿಧಾನಸಭಾ ಸಚಿವಾಲಯವನ್ನು ಇಷ್ಟುಕೆಳಮಟ್ಟಕ್ಕೆ ಇಳಿಸಿರುವುದನ್ನು ನೋಡಿಲ್ಲ. ಶಾಸಕರ ಭವನವೇನು ಸಭಾಧ್ಯಕ್ಷರಿಗೆ ಸಂಬಂಧಿಸಿದ ಆಸ್ತಿಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶಾಸಕರ ಭವನದಲ್ಲಿ ವಿಧಾನಸಭಾ ಸದಸ್ಯರಿಗೆ ಅಥವಾ ವಿಧಾನಪರಿಷತ್‌ ಸದಸ್ಯರಿಗೆ ನಿಗದಿಪಡಿಸಿದ ಕೋಣೆಗಳನ್ನೇ ಹಂಚಿಕೆ ಮಾಡಬೇಕು ಎಂಬ ನಿಯಮಗಳಿಲ್ಲ. ಒಂದು ವೇಳೆ ನಿಯಮಗಳಿದ್ದರೆ ವಿಧಾನಸಭಾ ಸಚಿವಾಲಯ 1981ರಿಂದ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಜೆಡಿಎಸ್‌ ಅಭ್ಯರ್ಥಿ ಶ್ರೀಪಾದ ಸಾಹುಕಾರ ತಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದರೆ ಅವರನ್ನು ಚುನಾವಣಾ ಕಣದಲ್ಲಿ ಎದುರಿಸಬೇಕೇ ಹೊರತು ಕ್ಷುಲ್ಲಕ ರಾಜಕೀಯ ಮಾಡುವ ಮೂಲಕ ಸಭಾಧ್ಯಕ್ಷರ ಹುದ್ದೆಗೆ ಅವಮಾನ ಮಾಡುತ್ತಿರುವ ನಿಮ್ಮ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ಶ್ರೀಪಾದ ಸಾಹುಕಾರ ಅವರಿಗೆ ಟಿಕೆಟ್‌ ನೀಡುವುದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಆದರೂ ದ್ವೇಷದ ರಾಜಕೀಯ ಮಾಡುತ್ತಿರುವುದು ಅತ್ಯಂತ ನೋವುಂಟು ಮಾಡಿದೆ. ವಯಸ್ಸು ಮತ್ತು ಅನುಭವಗಳಲ್ಲಿ ನೀವು ಹಿರಿಯರಾಗಿದ್ದು, ಇಂತಹ ಸಣ್ಣ ಮನಸ್ಸಿನ ಚಿಂತನೆಗಳ ಮೂಲಕ ಕಿರಿಯರಾಗಬಾರದು ಎಂಬುದು ನನ್ನ ಆಪೇಕ್ಷೆ. ನಾನು ಇರುವಂತೆ ಬೇರೆ ಬ್ಲಾಕ್‌ಗಳಲ್ಲಿ ಇರುವ ಇತರೆ ಶಾಸಕರಿಗೆ ತಮ್ಮ ಸಚಿವಾಲಯದಿಂದ ಹೊರಡಿಸಿದ ಆದೇಶಗಳ ಪ್ರತಿಯನ್ನು ನನಗೆ ಒದಗಿಸಿದಲ್ಲಿ ನಾನು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೊರಟ್ಟಿಪತ್ರದಲ್ಲಿ ವಿವರಿಸಿದ್ದಾರೆ.

Follow Us:
Download App:
  • android
  • ios