ಕೊಪ್ಪಳ (ಸೆ.17): ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಡೆದ ಗಲಭೆಗಳಲ್ಲಿ ಆರೆಸ್ಸೆಸ್ ಕೈವಾಡದ ಬಗ್ಗೆ ಗೃಹಮಂತ್ರಿ ಡಾ, ಜಿ.ಪರಮೇಶ್ವರ್ ಹೇಳಿಕೆಯನ್ನು ಸಚಿವ ಬಸವರಾಜ ರಾಯರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಲಭೆ ಕುರಿತು ಗೃಹ ಸಚಿವರಿಗೆ ಗುಪ್ತಚರ ವರದಿ ಬಂದಿದೆ, ಗೃಹ ಸಚಿವರು ಸುಖಾ ಸುಮ್ಮನೆ ಹೇಳಿಕೆ ನೀಡಿಲ್ಲ, ಅವರ ಬಳಿ ಸಾಕ್ಷ್ಯ ಇದೆ ಎಂದು ರಾಯರೆಡ್ಡಿ ಹೇಳಿದ್ದಾರೆ.

ಸರ್ಕಾರ ಅಸ್ಥಿರಗೊಳಿಸಲು ಷಡ್ಯಂತ್ರ ನಡೆದಿರಬಹುದು ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.