ವಚನ ಪಠಣ ವೇಳೆ ಇವರನಾರವ ಬದಲು ಅವನಾರವ ಎಂದ ಕಟೀಲ್‌| ಬೀದರ್‌ ಜಿಲ್ಲಾ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡುವ ವೇಳೆ ಎಡವಟ್ಟು

ಬೀದರ್‌[ಸೆ.10]: ಕಾಂಗ್ರೆಸ್‌ ನಿಕಟಪೂರ್ವ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಸವಣ್ಣನವರ ವಚನವನ್ನು ತಪ್ಪಾಗಿ ಉಚ್ಚರಿಸಿದ್ದು ಸುದ್ದಿಯಾಗಿತ್ತು. ಇದೀಗ ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.

ಸೋಮವಾರ ಬೀದರ್‌ ಜಿಲ್ಲಾ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡುವ ವೇಳೆ ‘ಇವನಾರವ ಇವನಾರವ ಇವನಾರನನೆಂದೆನಿಸದಿರಯ್ಯಾ’ ಬದಲಿಗೆ ಅವನಾರವ ಅವನಾರವ ಅವನಾರವ ಎಂದೆನಿಸದಿರಯ್ಯಾ ಎಂದು ಹೇಳಿದರು.

Scroll to load tweet…

ಬಿ.ಎಸ್‌. ಯಡಿಯೂರಪ್ಪ ಹೈದ್ರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಮಾಡಿದ್ದಾರೆ. ನಾನು ಕರ್ನಾಟಕ ಕಲ್ಯಾಣ ಮಾಡಲಿಕ್ಕೆ ಬೀದರ್‌ ನಗರಕ್ಕೆ ಬಂದಿದ್ದೇನೆ ಎಂದರು. ಇದೇ ವೇಳೆ ಬಸವಣ್ಣನವರ ‘ಇವನಾರವ ಇವನಾರವ ಇವನಾರನನೆಂದೆನಿಸದಿರಯ್ಯಾ’ ಬದಲಿಗೆ ‘ಅವನಾರವ ಅವನಾರವ ಅವನಾರವ ಎಂದೆನಿಸದಿರಯ್ಯಾ’ ಅಂತ ತಪ್ಪು ವಚನ ಹೇಳಿ ಎಡವಟ್ಟು ಮಾಡಿಕೊಳ್ಳುತ್ತಿದ್ದಂತೆ ಅಲ್ಲಿದ್ದವರು ಮುಖ ಗಂಟಿಕ್ಕಿಕೊಂಡು ತಪ್ಪನ್ನು ತಿದ್ದುವ ಪ್ರಯತ್ನ ನಡೆಸಿದಾದರೂ ಅಷ್ಟರಲ್ಲೇ ಕಾಲ ಮಿಂಚಿ ಹೋಗಿತ್ತು.