ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ನಿಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ಸಲ್ಲಿಸಿ ಎಂದು ಸಚಿವ ಕುಲಕರ್ಣಿ ಅವರಿಗೆ ಹೇಳಿದ್ದಾರೆ. ಅಲ್ಲದೇ ಬಸವಣ್ಣನ ನಿಜವಾದ ಅನುಯಾಯಿ ಆಗಿದ್ದಲ್ಲಿ ಅವರು ಸಿಬಿಐ ತನಿಖೆಯನ್ನು ಎದುರಿಸಲಿ ಎಂದು ಸ್ವಾಮೀಜಿ ಹೇಳಿದ್ದಾರೆ.
ಧಾರವಾಡ( ಡಿ.3): ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಧಾರವಾಡ ತಾಲೂಕಿನ ಮನಗುಂಡಿಯ ಶ್ರೀ ಗುರು ಬಸವ ಮಹಾಮನೆ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ನಿಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ಸಲ್ಲಿಸಿ ಎಂದು ಸಚಿವ ಕುಲಕರ್ಣಿ ಅವರಿಗೆ ಹೇಳಿದ್ದಾರೆ. ಅಲ್ಲದೇ ಬಸವಣ್ಣನ ನಿಜವಾದ ಅನುಯಾಯಿ ಆಗಿದ್ದಲ್ಲಿ ಅವರು ಸಿಬಿಐ ತನಿಖೆಯನ್ನು ಎದುರಿಸಲಿ ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದಿದ್ದು, ಇದೀಗ ಸ್ವಾಮೀಜಿ ಅವರು ರಾಜೀನಾಮೆ ನೀಡಲಿ ಎಂದಿದ್ದಾರೆ.