ಪತ್ರಕರ್ತೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಬರ್ಖಾ ದತ್‌ಗೆ ಬರುತ್ತಿರುವ ಅಶ್ಲೀಲ ಸಂದೇಶಗಳಿಗೆ ಕೊನೆಯೇ ಇಲ್ಲದಂತಾಗಿದೆ. ದೆಹಲಿ ಪೊಲೀಸರಿಗೆ ಆಕೆ ದೂರು ನೀಡಿದ್ದರೂ ಯಾವುದೇ ಪರಿಣಾಮ ಆಗುತ್ತಿಲ್ಲ.
ನವದೆಹಲಿ[ಫೆ.20] ಪುಲ್ವಾಮ ದಾಳಿಯ ಬಳಿಕ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಬರ್ಖಾ ದತ್ ಬರೆದುಕೊಂಡಿದ್ದರ ಬಗ್ಗೆಯೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಭದ್ರತೆಯ ಭಾವ ಎದುರಿಸುತ್ತಿರುವ ಯಾವುದೇ ಕಾಶ್ಮೀರಿಗಳ ಸಹಾಯಕ್ಕಾಗಿ ತಮ್ಮ ಮನೆಯ ಬಾಗಿಲು ಎಂದಿಗೂ ತೆರೆದಿರುತ್ತದೆ ಎಂದು ದತ್ ಹೇಳಿದ್ದರು.
ಅದ್ಯಾವುದೋ ಕಾರಣಕ್ಕೆ ದತ್ ಅವರ ದೂರವಾಣಿ ಸಂಖ್ಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಪರಿಣಾಮ ಸಾವಿರಾರು ಸಂದೇಶಗಳು ಬರತೊಡಗಿವೆ. ಅದರಲ್ಲಿಯೂ ಕೆಲ ಅಶ್ಲೀಲ ಸಂದೇಶಗಳನ್ನು ಅನಿವಾರ್ಯವಾಗಿ ದತ್ ಸಹಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೇಳಿಕೆ ತಂದ ಎಡವಟ್ಟು, ಬರ್ಖಾ ದತ್ ವಾಟ್ಸಪ್‌ಗೆ ಪುರುಷ ಜನನಾಂಗದ ಚಿತ್ರ ಕಳಿಸಿದ ಭೂಪ
ನಗ್ನ ಚಿತ್ರಗಳು, ಲೈಂಗಿಕ ಶೋಷಣೆ ಮಾಡುವ ಸಂದೇಶಗಳು ದತ್ ಮೊಬೈಲ್‌ಗೆ ಬರುತ್ತಲೇ ಇವೆ. ದತ್ ಈ ಬಗ್ಗೆ ಟ್ವೀಟ್ ಮಾಡಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
