ನವದೆಹಲಿ[ಫೆ.18] ಪುಲ್ವಾಮ ದಾಳಿಯ ಬಳಿಕ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಬರ್ಖಾ ದತ್ ಬರೆದುಕೊಂಡಿದ್ದರ ಬಗ್ಗೆಯೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಭದ್ರತೆಯ ಭಾವ ಎದುರಿಸುತ್ತಿರುವ ಯಾವುದೇ ಕಾಶ್ಮೀರಿಗಳ ಸಹಾಯಕ್ಕಾಗಿ ತಮ್ಮ ಮನೆಯ ಬಾಗಿಲು ಎಂದಿಗೂ ತೆರೆದಿರುತ್ತದೆ" ಎಂದು ಹೇಳಿದ್ದರು.

ಆದರೆ ಇದು ಮತ್ತೊಂದು ತಿರುವನ್ನು ಪಡೆದುಕೊಂಡಿದೆ.  ಬರ್ಖಾ ದತ್ ಅವರ ಫೋನ್ ನಂಬರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪರಿಣಾಮ ಅನೇಕರು ಅಶ್ಲೀಲ ಸಂದೇಶ ರವಾನಿಸಲು ಆರಂಭಿಸಿದ್ದಾರೆ. ಕೆಲವರು ಪುರುಷನ ಜನನಾಂಗದ ಪೋಟೋ ಕಳಿಸಿದ್ದಾರೆ.

ಈ ಬಗ್ಗೆ ದತ್ ದೆಹಲಿ ಪೊಲೀಸರ ನೆರವನ್ನು ಕೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಸ್ವತಃ ದತ್ ಅವರೇ ಬರೆದುಕೊಂಡಿದ್ದಾರೆ. ಇದಕ್ಕೂ ಸಹ ಜನರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.