ಪೇಶಾವರ: ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಎಲ್ಲರೂ ಗಡ್ಡ ಮೀಸೆಯನ್ನು ವಿವಿಧ ರೀತಿ ಕತ್ತರಿಸಿಕೊಳ್ಳುತ್ತಾರೆ. ಆದರೆ, ಪಾಕಿಸ್ತಾನದ ಖೈಬರ್‌ ಫಖ್ತಾನ್‌ಖ್ವಾ ಪ್ರಾಂತ್ಯದಲ್ಲಿ ಕ್ಷೌರಿಕರು ತಮ್ಮ ಗಿರಾಕಿಗಳನ್ನು ಮೆಚ್ಚಿಸಲು ಹೇಗೆ ಬೇಕಾದರೂ ಗಡ್ಡಕ್ಕೆ ಕತ್ತಿಹಾಕುವಂತೆ ಇಲ್ಲ. ಇಸ್ಲಾಂಗೆ ವಿರುದ್ಧವಾದ ರೀತಿಯಲ್ಲಿ ಗಡ್ಡವನ್ನು ವಿನ್ಯಾಸಗೊಳಿಸಿದ ಕಾರಣಕ್ಕೆ ನಾಲ್ವರು ಕ್ಷೌರಿಕರನ್ನು ಬಂಧಿಸಲಾಗಿದೆ.

ಸೆ.30ರಂದೇ ಈ ಘಟನೆ ನಡೆದಿದ್ದು, ಪೊಲೀಸರು ಕ್ಷೌರಿಕರನ್ನು ಬಂಧಿಸಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಗ್ರಾಹಕರ ಗಡ್ಡವನ್ನು ವಿನ್ಯಾಸಗೊಳಿಸಿದ್ದು, ಇಸ್ಲಾಂಗೆ ವಿರುದ್ಧ ಎಂದು ಹೇಳಿರುವ ಕ್ಷೌರಿಕರ ಸಂಘಟನೆ ದೂರು ದಾಖಲಿಸಿತ್ತು.

ಈ ಹಿನ್ನೆಲೆಯಲ್ಲಿ ಕ್ಷೌರಿಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಗ್ರಾಹಕರ ಗಡ್ಡವನ್ನು ವಿನ್ಯಾಸಗೊಳಿಸಿದ ತಪ್ಪಿಗೆ ಪೊಲೀಸರು ತಲಾ 5,000 ರು. ದಂಡ ವಿಧಿಸಿದ್ದಾರೆ.