ವಾಷಿಂಗ್ಟನ್(ಸೆ.30): ನನ್ನ ಇಬ್ಬರು ಪುತ್ರಿಯರು ದೇಶ ಸೇವೆಗಾಗಿ ಸೇನೆ ಸೇರಲು ಬಯಸಿದರೆ ನಾನು ಹೆಮ್ಮೆ ಪಡುವೆ ಎಂದು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ವರ್ಜಿನಿಯಾದ ಮಿಲಿಟರಿ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಒಬಾಮಾ, ನಿಮ್ಮ ಮಕ್ಕಳು ಸೇನೆ ಸೇರಲು ಇಷ್ಟಪಟ್ಟರೆ ನಿಮ್ಮ ಪ್ರತಿಕ್ರಿಯೆ ಏನು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಒಬಾಮಾ ಈ ರೀತಿಯಾಗಿ ಉತ್ತರಿಸಿದ್ದಾರೆ.
ತಮ್ಮ ಮಕ್ಕಳು ಸೈನ್ಯ ಸೇರುವುದನ್ನು ಕಂಡಿರುವ ಪ್ರತಿ ತಂದೆ-ತಾಯಿ ಹೆಮ್ಮೆ ಪಡುತ್ತಾರೆ ಎಂದಿದ್ದಾರೆ.
