ವಾಷಿಂಗ್ಟನ್(ಜು.31): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮಾತ್ರ ನಿಜಕ್ಕೂ ಜನಸಾಮಾನ್ಯರ ನಾಯಕ. ಅಧಿಕಾರದಲ್ಲಿದ್ದಾಗಲೇ ಜನಸಾಮಾನ್ಯರನ್ನು ತುಂಬ ಆತ್ಮೀಯವಾಗಿ ಬೆರೆಯುತ್ತಿದ್ದ ಒಬಾಮ್, ಅಧಿಕಾರದಿಂದ ನಿರ್ಗಮಿಸಿದ ಮೇಲೂ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 ಇತ್ತೀಚೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡನ್, ಒಟ್ಟಿಗೆ ವಾಷಿಂಗ್ಟನ್ ಡಿಸಿಯ ಬೇಕರಿಯೊಂದರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬೇಕರಿಯಲ್ಲಿ ಜನಸಾಮಾನ್ಯರ ಜೊತೆ ಬೆರೆತು ತಿಂಡಿ ಸೇವಿಸಿದ್ದಾರೆ ಇಬ್ಬರೂ ನಾಯಕರು.

ಇಲ್ಲಿನ ಜಾರ್ಜ್ ಟೌನ್ ನ ಡಾಗ್ ಟ್ಯಾಗ್ ಬೇಕರಿಗೆ ಭೇಟಿ ನೀಡಿದ ಒಬಾಮ ಮತ್ತು ಜೋ, ಎಲ್ಲರ ಜೊತೆ ಬೆರೆತು ಫೋಟೋಗೆ ಪೋಸ್ ನೀಡಿದರು. ಒಬಾಮ ಮತ್ತು ಜೋ ಬಿಡನ್ ಸಾಮಾನ್ಯರಂತೆ ಬೇಕರಿಗೆ ಭೇಟಿ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.