ಆಸ್ಪತ್ರೆಯೊಂದಕ್ಕೆ ಸಂತನ ವೇಷದಲ್ಲಿ ಭೇಟಿ ನೀಡಿದ ಅಮೆರಿಕದ ಮಾಜಿ ಅದ್ಯಕ್ಷ ಬರಾಕ್ ಒಬಾಮಾ ಮಕ್ಕಳ ಮೊಗದಲ್ಲಿ ನಗೆ ಮೂಡಿಸಿದ್ದು ಹೀಗೆ...
ವಾಷಿಂಗ್ಟನ್[ಡಿ.20]: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈ ಬಾರಿ ಸಾಂತಾಕ್ಲಾಸ್ ಆಗಿದ್ದಾರೆ. ತಲೆ ಮೇಲೊಂದು ಕೆಂಪು ಟೋಪಿ, ಹೆಗಲಿಗೊಂದು ಜೋಳಿಗೆ ಹಾಕಿ ವಾಷಿಂಗ್ಟನ್‌ನ ಆಸ್ಪತ್ರೆಗೆ ಪುಟ್ಟ ಮಗುವನ್ನು ಭೇಟಿಯಾಗಲು ತಲುಪಿದ್ದಾರೆ. ತಮ್ಮ ಜೋಳಿಗೆ ತುಂಬಾ ಗಿಫ್ಟ್‌ಗಳನ್ನೊಯ್ದಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಇವೆಲ್ಲವನ್ನೂ ಚಿಲ್ಡ್ರನ್ ನ್ಯಾಷನಲ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ ನೀಡಿ ಖುಷಿ ಹಂಚಿದ್ದಾರೆ.
ಸಾಂತಾ ಆಘಿ ಬಂದ ಬರಾಕ್ ಒಬಾಮಾರನ್ನು ನೋಡಿ ಆಸ್ಪತ್ರೆ ಸಿಬ್ಬಂದಿಗಳೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಲಾರಂಭಿಸಿದ್ದಾರೆ. ಇದನ್ನು ನೋಡಿದ ಒಬಾಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯ ಅಧಿಕೃತ ಟ್ವಿಟರ್ ಖಾತೆಯಿಂದ ಮಾಜಿ ಅಧ್ಯಕ್ಷರ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.
ಮಕ್ಕಳನ್ನು ಭೇಟಿಯಾದ ಬಳಿಕ ಮಾತನಾಡಿದ ಬರಾಕ್ ಒಬಾಮಾ'ಆಸ್ಪತ್ರೆಯಲ್ಲಿದ್ದ ಮಕ್ಕಳು ಹಾಗೂ ಅವರ ಹೆತ್ತವರನ್ನು ಭೇಟಿಯಾಗಿ ನನಗೆ ಖುಷಿಯಾಗಿದೆ. ಇಬ್ಬರು ಹೆಣ್ಮಕ್ಕಳಿರುವ ನಾನು, ಮಕ್ಕಳನ್ನು ಚೆನ್ನಾಗಿ ನೋಡುವವರಿಗೆ ಆತ್ಮೀಯನಾಗಿರುವುದು ಅತ್ಯಗತ್ಯ' ಎಂದಿದ್ದಾರೆ.
ಅಮೆರಿಕಾದ 44ನೇ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅಧಿಕಾರಾವಧಿ ಮುಗಿದ ಬಳಿಕ ವಾಷಿಂಗ್ಟನ್‌ನಲ್ಲಿ ಉಳಿದುಕೊಂಡಿದ್ದಾರೆ. ಈ ಹಿಂದೆ 2017ರಲ್ಲೂ ಇವರು ಸಾಮಾತಾ ಆಗಿ ಶಾಲೆಯೊಂದಕ್ಕೆ ಭೇಟಿ ನೀಡಿ ಕ್ಕಳಿಗೆ ಸರ್ಪ್ರೈಜ್ ನೀಡಿದ್ದರು.
