ಶಬರಿಮಲೆ[ಜ.07]: ಇಲ್ಲಿನ ಆಯ್ಯಪ್ಪ ದೇಗುಲಕ್ಕೆ ಋುತುಮತಿ ವಯಸ್ಸಿನ ಮಹಿಳೆಯರ ಪ್ರವೇಶ ಕೇರಳದಾದ್ಯಂತ ಭಾರೀ ಹಿಂಸಾಚಾರಕ್ಕೆ ಕಾರಣವಾಗಿರುವ ಬೆನ್ನಲ್ಲೇ, ದೇಗುಲ ಮುಂದೆ ಇರುವ ಅಶ್ವತ್ಥ ಮರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಶಬರಿಗೆಮಲೆಗೆ ಮೂರಲ್ಲ 10 ಮಹಿಳೆಯರ ಪ್ರವೇಶ!

ದೇಗುಲದ ಮುಂದೆ ಇರುವ 18 ಮೆಟ್ಟಿಲುಗಳ ಸಮೀಪದಲ್ಲೇ ಈ ಅಶ್ವತ್ಥ ಮರದ ಇದೆ. ಮೆಟ್ಟಿಲು ಹತ್ತುವ ಮುನ್ನ ಭಕ್ತರು ಮರಕ್ಕೆ ನಮಸ್ಕರಿಸಿಯೇ ಮುಂದುವರೆಯುತ್ತಾರೆ. ಈ ಮರದ ಪಕ್ಕದಲ್ಲೇ ದೊಡ್ಡ ಅಗ್ನಿಕುಂಡವಿದೆ. ಭಕ್ತರು ತಾವು ತಂದ ತೆಂಗಿನಕಾಯಿ ಮತ್ತು ತುಪ್ಪವನ್ನು ಈ ಅಗ್ನಿಕುಂಡಕ್ಕೆ ಅರ್ಪಿಸುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಸದಾ ಬೆಂಕಿ ಇರುತ್ತದೆ. ಆದರೆ ಈ ಬೆಂಕಿ ಎಂದಿಗೂ ಮರಕ್ಕೆ ಹತ್ತಿಕೊಂಡ ಉದಾಹರಣೆ ಇಲ್ಲ.

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಮತ್ತು ಇನ್ವಿಸಿಬಲ್ ಗೋರಿಲ್ಲಾ!

ಆದರೆ ಇದೀಗ ಆಕಸ್ಮಿಕವಾಗಿ ಅಶ್ವತ್ಥ ಮರಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅದನ್ನು ದೇಗುಲದ ಸಿಬ್ಬಂದಿ ನಂದಿಸಿದ್ದಾರೆ. ಈ ಬೆಂಕಿ ನಂದಿಸುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಮತ್ತು ಮಹಿಳೆಯರು ದೇಗುಲ ಪ್ರವೇಶಿಸಿದ್ದರಿಂದಲೇ ಈ ಅಪಶಕುನ ಸಂಭವಿಸಿದೆ ಎಂದು, ಮಹಿಳೆಯರ ಪ್ರವೇಶ ವಿರೋಧಿಸುವ ಗುಂಪು ವಾದಿಸುತ್ತಿದೆ.