ಹಳೆ ನೋಟು ರದ್ದು ಮಾಡಿ ಮತ್ತಷ್ಟುದೊಡ್ಡ ಮೊತ್ತದ ನೋಟು ಚಲಾವಣೆಗೆ ತರುವುದು ಅರ್ಥಕ್ರಾಂತಿ ಪ್ರತಿಷ್ಠಾನದ ಮಾದರಿ ಅಲ್ಲ ಎಂದು ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶದಲ್ಲಿ ಅನಿಲ್‌ ಬೋಕಿಲ್‌ ಹೇಳಿದ್ದಾರೆ.

ಮುಂಬೈ: ದೊಡ್ಡ ಮೊತ್ತದ ನೋ​ಟುಗಳ ಚಲಾವಣೆ ರದ್ದು ಮಾಡಬೇಕೆಂದು ಸಲಹೆ ನೀಡಿದ್ದ ಚಿಂತಕರ ಚಾವಡಿಗೆ ಕೇಂದ್ರ ಸರ್ಕಾರದ ಕ್ರಮ ರುಚಿಸಿಲ್ಲ. ಅರ್ಥಕ್ರಾಂತಿ ಪ್ರತಿಷ್ಠಾನದ ಮೂಲಕ ಸುಲಭ, ಸರಳ ಮತ್ತು ಸುಲಲಿತ ಆರ್ಥಿಕ ವಹಿವಾಟು ತಂತ್ರವನ್ನು ಪ್ರತಿಪಾದಿಸುತ್ತಿ​ರುವ ಚಿಂತಕರ ಚಾವಡಿ. ಅನಿಲ್‌ ಬೋ​ಕಿಲ್‌ ಚಾವಡಿಯ ಪ್ರಮುಖ. ಮೊದಲು ಪ್ರಧಾನಿ ಮೋದಿ ಅವರಿಗೆ ನೋಟು ಚಲಾವಣೆ ರದ್ದು ಮಾಡುವ ಚಿಂತನೆಯನ್ನು ಬಿತ್ತಿದವರು.

ಈಗ ನೋಟು ಚಲಾವಣೆ ರದ್ದು ಯೋಜನೆ ಜಾರಿಗೆ ಬಂದೇ ಬಿಟ್ಟಿದೆ. ಆದ​ರೆ, ಕೇಂದ್ರ ಸರ್ಕಾರದ ನೋಟು ಚಲಾ​ವಣೆ ರದ್ದು ಯೋಜನೆ ಅನಿಲ್‌ ಬೋಕಿಲ್‌ ಅವರಿಗೆ ಸಮಾಧಾನ ತಂದಿಲ್ಲ. ದೊಡ್ಡ ಮೌಲ್ಯದ ನೋಟು ರದ್ದು ಮಾಡಬೇಕೆಂದು ನಾವು ಪ್ರತಿಪಾದಿಸಿದ್ದೇವೆ. ಆದರೆ, ನೋ​ಟು ಬದಲಾಯಿಸಬೇಕು ಎಂದಿರಲಿಲ್ಲ ಎಂದು ಅನಿಲ್‌ ಬೋಕಿಲ್‌ ಹೇಳಿದ್ದಾರೆ. ನೋಟು ರದ್ದಾದ ಪ್ರಕಟಣೆ ಹೊರ ಬಿದ್ದ ನಂತರ ಪುಣೆಯಲ್ಲಿರುವ ಅನಿಲ್‌ ಬೋ​ಕಿಲ್‌ ಮತ್ತವರ ಸಂಗಡಿಗರು ಸೆಲಬ್ರಿಟಿಗ​ಳಾಗಿದ್ದಾರೆ. ಮುಂಬರುವ ಬಜೆಟ್‌'ಗೆ ಅರ್ಥಕ್ರಾಂತಿ ಪ್ರತಿಷ್ಠಾನ ಏನೆಲ್ಲ ಆರ್ಥಿಕ ಸಲಹೆ ನೀಡಬಹುದು ಎಂಬ ಕುತೂಹಲ ಅಲ್ಲಿನ ಜನರಲ್ಲಿದೆ. ನಾವು ಪ್ರಸ್ತಾಪಿಸಿದ್ದು ಈ ಮಾದರಿ ನೋಟು ಚಲಾವಣೆ ರದ್ದು ಯೋಜನೆ ಅಲ್ಲ ಎಂದಿದ್ದಾರೆ ಬೋಕಿಲ್‌. ಹಳೆ ನೋಟು ರದ್ದು ಮಾಡಿ ಮತ್ತಷ್ಟುದೊಡ್ಡ ಮೊತ್ತದ ನೋಟು ಚಲಾವಣೆಗೆ ತರುವುದು ಅರ್ಥಕ್ರಾಂತಿ ಪ್ರತಿಷ್ಠಾನದ ಮಾದರಿ ಅಲ್ಲ. ಆರ್ಥಿಕ ನೀತಿ ನಿಯಮ​ಗಳನ್ನು ಸರಳೀ​ಕರಿಸಿ ದೇಶದ ಸಮಾಜಿಕ ಆರ್ಥಿಕ ಪರಿಸ್ಥಿತಿ ಸಕಾರಾತ್ಮಕವಾಗಿ ಪರಿವರ್ತಿಸ​ಬೇಕು, ಬಂಡವಾಳ ಮತ್ತು ಸಾಲ ಸುಲಭ​ವಾಗಿ ದಕ್ಕಬೇಕು, ನಗದು ರಹಿತ ವ್ಯವಸ್ಥೆ ತಂದು ಕಪ್ಪುಹಣ ಹರಿದು ಬರುವುದನ್ನು ತಡೆಗಟ್ಟಬೇಕು ಎಂಬುದು ಪ್ರತಿಷ್ಠಾನದ ಚಿಂತನೆ ಎಂದು ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ.

2013ರಲ್ಲಿ ಗುಜರಾತ್‌ ಮಖ್ಯ​ಮಂತ್ರಿ​ಯಾಗಿದ್ದ ನರೇಂದ್ರಮೋದಿ ಅವ​ರನ್ನು ಅರ್ಥಕ್ರಾಂತಿ ಪ್ರತಿಷ್ಠಾನದ ಕಾರ್ಯ​ಕರ್ತರು ತೆರಿಗೆ ಸುಧಾರಣೆ ತರಬೇಕು ಮತ್ತು ಎಲ್ಲಾ ತೆರಿಗೆಗಳನ್ನು ರದ್ದು ಮಾಡಿ ಬ್ಯಾಂಕು ವಹಿವಾಟು ತೆರಿಗೆ ಜಾರಿಗೆ ತರುವಂತೆ ಸಲಹೆ ಮಾಡಿದ್ದರು. ಹೆಚ್ಚು ಮೊತ್ತದ ನೋಟುಗಳ ಚಲಾವಣೆ ರದ್ದು ಮಾಡುವುದು ಆರ್ಥಕ್ರಾಂತಿ ಪ್ರತಿ​ಷ್ಠಾನದ ಮೂರನೇ ಆದ್ಯತೆಯ ಪ್ರಸ್ತಾ​ಪವಾಗಿತ್ತು. ಕೇಂದ್ರ ಸರ್ಕಾರ ಈಗ .500 ಮತ್ತು .1000 ನೋಟುಗಳನ್ನು ಬದಲಾ​ಯಿಸಿದೆ. ಶೇ.84ರಷ್ಟಿರುವ ಈ ನೋಟು​ಗಳನ್ನು ಬದಲಾಯಿಸುವುದಕ್ಕೆ ಸಾಕಷ್ಟುಕಾಲಾವ ಕಾಶ ಬೇಕು. ಏಕಾಏಕಿ ಎಲ್ಲಾ ನೋಟ್ನು ರದ್ದು ಮಾಡಿದರೆ ನಗದು ಹರಿವು ಬರು ವುದೇಗೆ ಎಂಬುದು ಬೋಕಿಲ್‌ ಪ್ರಶ್ನೆ.

ಅರ್ಥಕ್ರಾಂತಿ ಪ್ರತಿಷ್ಠಾನದ ತತ್ವ:
* ಯಾವುದೇ ರಾಜಕೀಯ ಪಕ್ಷ, ಧಾರ್ಮಿಕ ಪಂಥಕ್ಕೆ ಬಾಗುವುದಿಲ್ಲ. ಹಣಕಾಸು ಮತ್ತು ಆರ್ಥಿಕತೆಯೊಂದಿಗೆ ಮಾತ್ರ ಸಂಬಂಧ.
* ನಮ್ಮ ಪ್ರಸ್ತಾಪಗಳನ್ನು ಸ್ವೀಕರಿಸುವ ಆರ್‌ಎಸ್‌ಎಸ್‌, ಕಾಂಗ್ರೆಸ್‌ ಅಥವಾ ಒವೈಸಿಯಾದರೂ ನಾವು ಬೆಂಬಲಿಸುತ್ತೇವೆ.
* ಮೋದಿ ಉತ್ತಮ ನಾಯಕ ಇರಬಹುದು, ಆದರೆ, ನೋಟು ರದ್ದು ನಮ್ಮ ಪ್ರಸ್ತಾಪದಂತಿಲ್ಲ.
* ನಾವು ನೋಟು ಚಲಾವಣೆ ರದ್ದಿಗೆ ಬೆಂಬಲಿಸುವುದಿಲ್ಲ, ದೊಡ್ಡ ಮೊತ್ತ ನೋಟು ಹಿಂಪಡೆಯಬೇಕಷ್ಟೇ.
* ಅಬ್ಕಾರಿ ಮತ್ತು ಆಮದು ಸುಂಕ ಹೊರತುಪಡಿಸಿ ಎಲ್ಲಾ ತೆರಿಗೆ ರದ್ದು ಮಾಡಬೇಕು.
* ಪ್ರತ್ಯಕ್ಷ, ಪರೋಕ್ಷ ತೆರಿಗೆ ರದ್ದುಮಾಡಿ, ಬ್ಯಾಂಕು ವಹಿವಾಟು ತೆರಿಗೆ ತರಬೇಕು
* ಶೇ.3-4ರಷ್ಟುಬಡ್ಡಿದರದಲ್ಲಿ ಸಾಲ ನೀಡಬೇಕು
* 2000 ರೂ. ಮೇಲ್ಪಟ್ಟ ವ್ಯವಹಾರ ಚೆಕ್‌ ರೂಪದಲ್ಲಿರಬೇಕು

(ಕನ್ನಡಪ್ರಭ)