ತಾಯಿ ಭೇಟಿ ಮಾಡಿದ ಭೂಗತ ಪಾತಕಿ ಬನ್ನಂಜೆ ರಾಜ

Bannanje Raja brought to Udupi to visit ailing mother
Highlights

ತಾಯಿಯನ್ನು ನೋಡಲು ಮಾನವೀಯ ದೃಷ್ಟಿಯಿಂದ ಪಾತಕಿ ಬನ್ನಂಜೆ ರಾಜನನ್ನು ಉಡುಪಿ ಕರೆತರಲಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ಇಂದು ಭೇಟಿ ಮಾಡಿದ್ದಾರೆ. 

ಉಡುಪಿ :  ಹಿಂಡಲಗಾ ಜೈಲಿನಲ್ಲಿರುವ ಖೈದಿಯಾಗಿರುವ ಬನ್ನಂಜೆ ರಾಜ ಇಂದು ಉಡುಪಿಗೆ ಆಗಮಿಸಿ ತಮ್ಮ ತಾಯಿಯನ್ನು ಭೇಟಿ ಮಾಡಿದ್ದಾರೆ.  ಮಲ್ಪೆ ಸಮೀಪದಲ್ಲಿರುವ ಸ್ವಗೃಹಕ್ಕೆ ಅವರ ತಾಯಿಯನ್ನು ನೋಡುವ ಸಲುವಾಗಿ ಪೊಲೀಸರು ರಾಜಾ ಅವರನ್ನು ಕರೆತಂದಿದ್ದರು.  

ನಿನ್ನೆಯಷ್ಟೇ ಹಿಂಡೆಲಗಾ ಜೈಲಿನಿಂದ ರಾಜನನ್ನು ಉಡುಪಿಗೆ ಕರೆತರಲಾಗಿದ್ದು, ಇಂದು ನಿವಾಸಕ್ಕೆ ಆಗಮಿಸಿ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರನ್ನು ಭೇಟಿ ಮಾಡಿದ್ದಾರೆ. ರಾಜಾ ಆಗಮನದ  ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. 

ರಾಜನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು,  ಈ ನಿಟ್ಟಿನಲ್ಲಿ ಪೊಲೀಸ್ ಭದ್ರತೆಯಲ್ಲೇ ತಾಯಿ ಮನೆಗೆ ಆಗಮಿಸಲಿದ್ದರು. 

ಮಾನವೀಯ ನೆಲೆಯಲ್ಲಿ ಮನೆ ಭೇಟಿಗೆ ನ್ಯಾಯಾಲಯವು ಅವಕಾಶ  ನೀಡಲಾಗಿದ್ದು, ಸದ್ಯ ವಿಚಾರಣಾಧೀನ‌ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿರುವ ರಾಜ, ಹದಿನೈದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

loader