ನಾಳೆ ಬ್ಯಾಂಕ್'ಗಳಲ್ಲಿ ಹಣ ವಿನಿಮಯವಿಲ್ಲ! ಭಾನುವಾರವೂ ರಜೆ
ನವದೆಹಲಿ(ನ.18): ಇಂದು(ನ.19) ದೇಶದ ಯಾವುದೆ ಬ್ಯಾಂಕುಗಳು ತಮ್ಮ ಬ್ಯಾಂಕಿನ ಖಾತೆಯಿರುವ ಗ್ರಾಹಕರನ್ನು ಹೊರತುಪಡಿಸಿ ಇತರ ಗ್ರಾಹಕರಿಗೆ ರದ್ದಾದ 500 ಹಾಗೂ 1000 ರೂ. ನೋಟುಗಳನ್ನು ವಿನಿಮಯ ಮಾಡುವುದಿಲ್ಲ. ಇಲ್ಲಿ ಕೊಂಚ ಬದಲಾವಣೆಯೇನಂದರೆ ಹಿರಿಯ ನಾಗರಿಕರು ಒಮ್ಮೆ 2,000 ಸಾವಿರದವರೆಗೂ ವಿನಿಮಯ ಮಾಡಿಕೊಳ್ಳಬಹುದು. ಭಾನುವಾರ ಎಲ್ಲ ಬ್ಯಾಂಕುಗಳಿಗೂ ರಜೆಯಿದ್ದು ಸೋಮವಾರ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ.
ಸಾರ್ವಜನಿಕರಿಗೆ ಶಾಹಿ ಬಳಸುತ್ತಿರುವ ನಂತರ ಬ್ಯಾಂಕುಗಳಲ್ಲಿ ಸರದಿ ಸಾಲಿನ ಜನ ಸಂದಣಿ ಕಡಿಮೆಯಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ಅಲ್ಲದೆ ಬ್ಯಾಂಕ್'ಗಳಲ್ಲಿ ಹಲವು ಬಾಕಿ ಕೆಲಸಗಳಿರುವುದರಿಂದ ಬೇರೆ ಗ್ರಾಹಕರಿಗೆ ಹಣ ನೀಡಲಾಗುವುದಿಲ್ಲ ಎಂದು ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಮುಖ್ಯಸ್ಥ ರಾಜೀವ್ ರಿಶಿ ತಿಳಿಸಿದ್ದಾರೆ
