ಆರ್'ಬಿಐ'ನಿಂದ ಅಧಿಸೂಚನೆ ಬಂದ ನಂತರ ಇದನ್ನು ಕಾರ್ಯಗತಗೊಳಿಸಲಾಗುವುದು

ನವದೆಹಲಿ(ನ.19): ನೋಟು ರದ್ದತಿಯಿಂದ ಪರಿಪಾಟಲು ಪಡುತ್ತಿರುವವರಿಗೆ ಒಂದಿಷ್ಟು ನಿಯಮ ಸಡಿಲಸಲಾಗಿದೆ. ಆದರೆ ಈ ನಿಯಮಗಳು ಹೊಸದಾಗಿ ಮದುವೆಯಾಗುವ ಕುಟುಂಬಗಳಿಗೆ ಮಾತ್ರ ಅನ್ವಯವಾಗುತ್ತದೆ.ಮದುವೆಯಾಗುವ ಕುಟುಂಬಗಳು 2.5 ಲಕ್ಷ ರೂ.ಗಳವರೆಗೂ ಬ್ಯಾಂಕ್'ಗಳಿಂದ ಹಣ ವಿತ್'ಡ್ರಾ ಮಾಡಿಕೊಳ್ಳಬಹುದು. ಇದು ವಧು-ವರ ಎರಡೂ ಕುಟುಂಬಗಳು ಮದುವೆ ಮಾಡುತ್ತಿರುವ ದಾಖಲೆಗಳನ್ನು ಸಲ್ಲಿಸಿ ಪ್ರತ್ಯೇಕವಾಗಿ ಹಣ ಪಡೆಯಬಹುದು. ಈ ನಿಯಮವು ಮುಂದಿನ ವಾರದಿಂದ ಜಾರಿಗೆ ಬರಲಿದೆ. ಆರ್'ಬಿಐ'ನಿಂದ ಅಧಿಸೂಚನೆ ಬಂದ ನಂತರ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್. ಕಾರ್ಪೋರೇಷನ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್'ಗಳ ಮುಖ್ಯಸ್ಥರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred