ಕಳೆದ ಹಣಕಾಸು ವರ್ಷದಲ್ಲಿ ಆನ್’ಲೈನ್ ವಂಚನೆಗೆ ಬ್ಯಾಂಕುಗಳು ₹16,789 ಕೋಟಿ ಹಣವನ್ನು ಕಳೆದಕೊಂಡಿವೆಯೆಂದು ಹಣಕಾಸು ಸಚಿವಾಲಯ ಹೇಳಿದೆ.

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಆನ್’ಲೈನ್ ವಂಚನೆಗೆ ಬ್ಯಾಂಕುಗಳು ₹16,789 ಕೋಟಿ ಹಣವನ್ನು ಕಳೆದಕೊಂಡಿವೆಯೆಂದು ಹಣಕಾಸು ಸಚಿವಾಲಯ ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹಣಕಾಸು ಇಲಾಖೆ ರಾಜ್ಯ ಸಚಿವ ಶಿವಪ್ರತಾಪ ಶುಕ್ಲಾ, ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು ಸುಮಾರು ₹ 16789 ಕೋಟಿಯನ್ನು ಕಳೆದುಕೊಂಡಿವೆ, ಎಂದು ತಿಳಿಸಿದ್ದಾರೆ.

ಆನ್’ಲೈನ್ ವಂಚನೆಯನ್ನು ತಡೆಯಲು ರಿಸರ್ವ್ ಬ್ಯಾಂಕ್ ಬೇರೆ ಬೇರೆ ಕ್ಷೇತ್ರದ ತಜ್ಞರನ್ನೊಳಗೊಂಡ ಸೈಬರ್ ಸೆಕ್ಯೂರಿಟಿ ಸಮಿತಿಯೊಂದನ್ನು ರಚಿಸಿದೆ ಎಂದು ಹೇಳಿದ್ದಾರೆ.

ಅದೇ ವೇಳೆ, ದರೋಡೆ, ಲೂಟಿ ಮುಂತಾದ ಘಟನೆಗಳಲ್ಲಿ ಬ್ಯಾಂಕುಗಳು ₹65.3 ಕೋಟಿ ಮೊತ್ತವನ್ನು ಕಳೆದುಕೊಂಡಿವೆ ಎಂದು ಅವರು ತಿಳಿಸಿದ್ದಾರೆ.