ಮನೆಯಲ್ಲಿ ಹಣ, ಒಡವೆ ಅಥವಾ ಮಹತ್ವದ ಕಾಗದಪತ್ರಗಳನ್ನು ಇಟ್ಟರೆ ಕಳವಾಗಬಹುದು. ಇದೇ ಕಾರಣಕ್ಕೆ ಬ್ಯಾಂಕ್‌ ಲಾಕರ್‌'ನಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ. ಆದರೆ ಲಾಕರ್‌'ನಲ್ಲಿಟ್ಟ ವಸ್ತುಗಳು ಡಕಾಯಿತರ ಪಾಲಾದರೆ, ಬ್ಯಾಂಕ್‌ ಅಧಿಕಾರಿಗಳೇ ಜವಾಬ್ದಾರಿ. ಅವರೇ ಉತ್ತರ ನೀಡಬೇಕು. ಜೊತೆಗೆ ಕಳೆದುಕೊಂಡ ನಷ್ಟಕ್ಕೆ ಬ್ಯಾಂಕ್​​ಗಳೇ ಪರಿಹಾರ ತುಂಬಿಕೊಡಬೇಕು. ಆದರೆ ಈ ಗ್ರಹಿಕೆ ತಪ್ಪಾಗಿದೆ ಯಾಕಂತೀರಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್

ನವದೆಹಲಿ(ಜೂ.26): ಮನೆಯಲ್ಲಿ ಹಣ, ಒಡವೆ ಅಥವಾ ಮಹತ್ವದ ಕಾಗದಪತ್ರಗಳನ್ನು ಇಟ್ಟರೆ ಕಳವಾಗಬಹುದು. ಇದೇ ಕಾರಣಕ್ಕೆ ಬ್ಯಾಂಕ್‌ ಲಾಕರ್‌'ನಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ. ಆದರೆ ಲಾಕರ್‌'ನಲ್ಲಿಟ್ಟ ವಸ್ತುಗಳು ಡಕಾಯಿತರ ಪಾಲಾದರೆ, ಬ್ಯಾಂಕ್‌ ಅಧಿಕಾರಿಗಳೇ ಜವಾಬ್ದಾರಿ. ಅವರೇ ಉತ್ತರ ನೀಡಬೇಕು. ಜೊತೆಗೆ ಕಳೆದುಕೊಂಡ ನಷ್ಟಕ್ಕೆ ಬ್ಯಾಂಕ್​​ಗಳೇ ಪರಿಹಾರ ತುಂಬಿಕೊಡಬೇಕು. ಆದರೆ ಈ ಗ್ರಹಿಕೆ ತಪ್ಪಾಗಿದೆ ಯಾಕಂತೀರಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾಕಂದ್ರೆ ಬ್ಯಾಂಕ್‌ ಲಾಕರ್‌ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌'ಗಳು ಜವಾಬ್ದಾ ರರಲ್ಲವಂತೆ ಹಾಗಂತ ಮಾಹಿತಿ ಹಕ್ಕು ಅಡಿ ಹಾಕಲಾದ ಅರ್ಜಿಯೊಂದರಿಂದ ತಿಳಿದುಬಂದಿದೆ. ಬ್ಯಾಂಕ್‌ ಲಾಕರ್‌ನಲ್ಲಿನ ಹಣ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಹೊಣೆಯಲ್ಲ ಎಂದು ಆರ್​​ಬಿಐ ಉತ್ತರ ಕೊಟ್ಟಿದೆ.

ಈ ಮಾಹಿತಿಯಿಂದ ಚಕಿತವಾಗಿರುವ ಅರ್ಜಿದಾರ ವಕೀಲ ಕುಶ್‌ ಕಾಲ್ರಾ ಎಂಬುವವರು, ಇದರ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗದ ಮೊರೆ ಹೋಗಿದ್ದಾರೆ. ಇಂಥಹ ನಿಯಮಗಳು ಸ್ಪರ್ಧಾತ್ಮಕತೆಗೆ ವಿರುದ್ಧವಾಗಿವ,. ಮನೆಯಲ್ಲಿ ಅಸುರಕ್ಷಿತ ಎಂಬ ಕಾರಣಕ್ಕೇ ಬ್ಯಾಂಕ್‌ ಲಾಕರ್‌ನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಲಾಕರ್‌ ಕೂಡ ಕಳವಾದರೆ ಅದರ ಹೊಣೆಯನ್ನು ಬ್ಯಾಂಕ್‌ಗಳು ಹೊರದೇ ಹೋದಾಗ, ಬ್ಯಾಂಕ್‌ ಲಾಕರ್‌ಗೆ ಸಾಕಷ್ಟುಶುಲ್ಕ ತುಂಬಿ ವಸ್ತುಗಳನ್ನು ಇಡುವುದರಿಂದ ಏನು ಪ್ರಯೋಜನ ಎಂದು ವಾದಿಸಿದ್ದಾರೆ.