Asianet Suvarna News Asianet Suvarna News

ಅಖಿಲ ಭಾರತ ಬ್ಯಾಂಕ್‌ ಮುಷ್ಕರ : ಗ್ರಾಹಕರೇ ಎಚ್ಚರ

ಬ್ಯಾಂಕ್‌ಗಳ ವಿಲೀನಕರಿಸುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ವಿರೋಧಿಸಿ ಮತ್ತು ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ ಮತ್ತೆ ಮುಷ್ಕರ ನಡೆಯುತ್ತಿದೆ. 

Bank Unions to protest against PSU banks merger
Author
Bengaluru, First Published Dec 26, 2018, 7:44 AM IST

ದಾವಣಗೆರೆ: ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಬ್ಯಾಂಕ್‌ ಆಫ್‌ ಬರೋಡ, ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ಗಳ ವಿಲೀನಕರಿಸುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ವಿರೋಧಿಸಿ ಮತ್ತು ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ ಅಖಿಲ ಭಾರತ ಬ್ಯಾಂಕ್‌ ಮುಷ್ಕರ ಡಿ.26ರಂದು ಇಲ್ಲಿನ ಪಿಬಿ ರಸ್ತೆ, ಅರುಣಾ ಟಾಕೀಸ್‌ ಎದುರಿನ ವಿಜಯ ಬ್ಯಾಂಕ್‌ ಆವರಣದಲ್ಲಿ ನಡೆಯುತ್ತಿದೆ.  

ಬೆಳಗ್ಗೆ 10ಕ್ಕೆ ಮುಷ್ಕರ ಹಾಗೂ ಮತ ಪ್ರದರ್ಶನ ನಡೆಯಲಿದೆ. ಮುಷ್ಕರದಲ್ಲಿ ಜಿಲ್ಲೆಯ ಯುಎಫ್‌ಬಿಯು ಎಲ್ಲಾ ನೌಕರರು, ಅಧಿಕಾರಿಗಳು, ಪಿಗ್ಮಿ ಸಂಗ್ರಹಗಾರರು ಭಾಗವಹಿಸಿ ಮುಷ್ಕರ ಯಶಸ್ವಿಗೊಳಿಸುವಂತೆ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ ಮನವಿ ಮಾಡಿದ್ದಾರೆ.

ಜಿಲ್ಲಾ ವಿಶೇಷ ತರಬೇತಿ ಶಿಬಿರ

ದಾವಣಗೆರೆ: ಜಿಲ್ಲಾ ಸಹಕಾರ ಯೂನಿಯನ್‌ ನಿಯಮಿತದಿಂದ ದಾವಣಗೆರೆ, ಹರಿಹರ ತಾ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಶಿಬಿರ ಡಿ.26ರಂದು ಇಲ್ಲಿನ ಜನತಾ ಬಜಾರ್‌ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10ಕ್ಕೆ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಯು.ಜಿ.ಶಿವಕುಮಾರ ಅಧ್ಯಕ್ಷತೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜೆ.ಆರ್‌.ಷಣ್ಮುಖಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಅಧ್ಯಕ್ಷ ಬಿ.ವಿ.ಚಂದ್ರಶೇಖರ, ಎಸ್‌.ಬಿ.ಶಿವಕುಮಾರ, ಎಚ್‌.ಕೆ.ಪಾಲಾಕ್ಷಪ್ಪ, ಜಗದೀಶಪ್ಪ ಬಣಕಾರ, ಜಿ.ಎಸ್‌.ಪರಮೇಶ್ವರ ಗೌಡ್ರು, ಕೆ.ಉಷಾ ಚಿದಾನಂದಪ್ಪ, ಎ.ಎಸ್‌.ವೀಣಾ ಶಿವಕುಮಾರ, ಅನ್ನಪೂರ್ಣ, ಎನ್‌.ಸುರೇಶ, ಎಂ.ಟಿ.ಮಂಜುನಾಥ, ಎಂ.ದಕ್ಷಿಣಾಮೂರ್ತಿ, ಡಾ.ಎನ್‌.ಗುರುಶೇಖರನ್‌, ಡಾ.ಕೆ.ಎಂ.ವಿಜಯಕುಮಾರ, ಕೆ.ಕರಿಯಮ್ಮ, ಕುಮಾರ ನಾಯ್ಕ, ಎಂ.ಸಿ.ಆನಂದಸ್ವಾಮಿ, ಎಂ.ಸಿ.ಆನಂದಸ್ವಾಮಿ, ಮಲ್ಲಿಕಾರ್ಜುನ ಪೂಜಾರಿ ಭಾಗವಹಿಸುವರು.

Follow Us:
Download App:
  • android
  • ios