Asianet Suvarna News Asianet Suvarna News

ಬ್ಯಾಂಕ್ ನಲ್ಲಿ ಸಾಲ ಮಾಡಿದ್ದೀರಾ : ಎಚ್ಚರ ..!

ನೀವು ಬ್ಯಾಂಕ್ ಸಾಲಗಾರರಾಗಿದ್ದೀರಾ, ಹಾಗಾದ್ರೆ ನೀವಯ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ಕೇವಲ 1 ರು. ಸಾಲ ಬಾಕಿ ಉಳಿಸಿಕೊಂಡು ಸುಸ್ತಿದಾರನಾಗಿದ್ದಕ್ಕೆ, ಬ್ಯಾಂಕೊಂದು ವ್ಯಕ್ತಿಯೊಬ್ಬನಿಗೆ 138 ಗ್ರಾಂ ಚಿನ್ನ ಮರಳಿಸಲು ನಿರಾಕರಿಸಿದ ಘಟನೆ ನಡೆದಿದೆ. 

Bank refuses to return pledged gold citing default of Re 1

ಚೆನ್ನೈ: ಕೇವಲ 1 ರು. ಸಾಲ ಬಾಕಿ ಉಳಿಸಿಕೊಂಡು ಸುಸ್ತಿದಾರನಾಗಿದ್ದಕ್ಕೆ, ಬ್ಯಾಂಕೊಂದು ವ್ಯಕ್ತಿಯೊಬ್ಬನಿಗೆ 138 ಗ್ರಾಂ ಚಿನ್ನ ಮರಳಿಸಲು ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದಾನೆ. ಘಟನೆ ಹಿನ್ನೆಲೆ: ಕುಮಾರ್ ಎಂಬುವವರು 2010 ರಲ್ಲಿ ಕಾಂಚೀಪುರಂ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕ್ ನಲ್ಲಿ 131 ಗ್ರಾಂ ಚಿನ್ನ ಅಡ ಇಟ್ಟು 1.23 ಲಕ್ಷ ರು. ಸಾಲ ಪಡೆದು, ಅದನ್ನು 2011 ರಲ್ಲಿ ತೀರಿಸಿದ್ದರು.
 
ಬಳಿಕ ಮತ್ತೆ 138 ಗ್ರಾಂ ಚಿನ್ನ ಅಡ ಇಟ್ಟು 1.65 ಲಕ್ಷ ರು. ಸಾಲ ಪಡೆದಿದ್ದರು. ಕೆಲ ಸಮಯದ ನಂತರ ಆ ಸಾಲವನ್ನೂ ಮರುಪಾವತಿ ಮಾಡಿ ದ್ದರು. ಆದರೆ ಈ ವೇಳೆ ಚಿನ್ನ ಹಿಂದಿರುಗಿಸಲು ಬ್ಯಾಂಕ್ ನಿರಾಕರಿಸಿದೆ. ಈ ಬಗ್ಗೆ ಕುಮಾರ್ ವಿಚಾರಿಸಿ ದಾಗ ಎರಡನೇ ಬಾರಿ ಪಡೆದಿದ್ದ ಸಾಲದಲ್ಲಿ 1 ರು. ಬಾಕಿ ಉಳಿದುಕೊಂಡಿದ್ದು, ಅದು ಸುಸ್ತಿಯಾಗಿದೆ ಎಂದಿದೆ.

Follow Us:
Download App:
  • android
  • ios