Asianet Suvarna News Asianet Suvarna News

ತನ್ನ ಮೇಲೆ ಬಳೆ ಎಸೆದವನಿಗೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದು ಹೀಗೆ

ಮೋದಿ ಸರಕಾರದ ಮೂರು ವರ್ಷಗಳ ಸಾಧನಾ ಸಮಾವೇಶದಲ್ಲಿ ಸಚಿವೆ ಮಾತನಾಡುತ್ತಿರಬೇಕಾದರೆ ಆರೋಪಿಯು ವೇದಿಕೆಗೆ ಹತ್ತಿರದಲ್ಲೇ ಆಸೀನನಾಗಿದ್ದ. ಏಕಾಏಕಿ ಬಳೆಗಳನ್ನು ವೇದಿಕೆಯತ್ತ ಎಸೆದು ವಂದೇ ಮಾತರಂ ಎಂದು ಕೂಗಿದ್ದಾನೆ.

Bangles Thrown at Smriti Irani
  • Facebook
  • Twitter
  • Whatsapp

ಅಮ್ರೇಲಿ: ಗುಜರಾತ್ ಅಮ್ರೇಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯತ್ತ ವ್ಯಕ್ತಿಯೊಬ್ಬ ಬಳೆ ಎಸೆದಿದ್ದು, ಅದನ್ನು ಆತನ ಪತ್ನಿಗೆ ಉಡುಗೊರೆಯಾಗಿ ಕಳಿಸುವುದಾಗಿ ಇರಾನಿ ಹೇಳಿದ್ದಾರೆ.

ಕೇತನ್‌ ಕಸ್ವಾಲ ಎಂಬಾತ ಇರಾನಿ ಅವರತ್ತ ಬಳೆ ಎಸೆದು ವಂದೇ ಮಾತರಂ ಎಂದು ಕೂಗಿದ್ದ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದು ಅಲ್ಲಿಂದ ಹೊರಗೆ ಕರೆದೊಯ್ದರು.

ಮೋದಿ ಸರಕಾರದ ಮೂರು ವರ್ಷಗಳ ಸಾಧನಾ ಸಮಾವೇಶದಲ್ಲಿ ಸಚಿವೆ ಮಾತನಾಡುತ್ತಿರಬೇಕಾದರೆ ಆರೋಪಿಯು ವೇದಿಕೆಗೆ ಹತ್ತಿರದಲ್ಲೇ ಆಸೀನನಾಗಿದ್ದ. ಏಕಾಏಕಿ ಬಳೆಗಳನ್ನು ವೇದಿಕೆಯತ್ತ ಎಸೆದು ವಂದೇ ಮಾತರಂ ಎಂದು ಕೂಗಿದ್ದಾನೆ.

ಆಗ ಪೊಲೀಸರು ಧಾವಿಸಿ ಆತನನ್ನು ಹೊರಕ್ಕೆ ಕರೆದೊಯ್ದಿದ್ದಾರೆ. ಕೂಡಲೇ ಸಚಿವೆ ಇರಾನಿ ಅವರು, ‘ಆತ ಅಲ್ಲೇ ಇರಲಿ ಬಿಡಿ. ಆತ ಎಸೆದ ಬಳೆಗಳನ್ನು ಆತನ ಪತ್ನಿಗೆ ಉಡುಗೊರೆಯಾಗಿ ಕಳಿಸುವೆ,' ಎಂದು ಹೇಳಿದ್ದಾರೆ.

Follow Us:
Download App:
  • android
  • ios