ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಕೂಗು ಆಗಾಗ ಕೇಳಿ ಬರುತ್ತಲೆ ಇದೆ. ಸರಕಾರ ಇಲ್ಲ ಎಂಬ ಸಮರ್ಥನೆ ನೀಡಿಕೊಂಡೆ ಬಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರು ಪೊಲೀಸರು ಬಾಂಗ್ಲಾ ವಲಸಿಗ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

ಬೆಂಗಳೂರು[ಆ.23] ಆಂತರಿಕ ಭದ್ರತಾ ವಿಭಾಗ ಮತ್ತು ಸರ್ಜಾಪುರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಶೋಬಿಕುಲ್ ಇಸ್ಲಾಂ (20) ಬಂಧಿತ ವಿದ್ಯಾರ್ಥಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 30ಕ್ಕೂ ಹೆಚ್ಚು 7.62 ಖಾಲಿ ಕಾಡತೂಸು (ಕಾಟ್ರೇಜ್) ಮತ್ತು ಒಂದು
ವಾಕಿಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈತ ಶಿಕ್ಷಣ ವೀಸಾದಡಿ ಸರ್ಜಾಪುರ ಹತ್ತಿರದ ಕೊಮ್ಮಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅವಧಿ ಮುಗಿದರೂ
ಇಲ್ಲಿಯೇ ಅಕ್ರಮವಾಗಿ ವಾಸವಾಗಿದ್ದಾನೆ.
ನಗರ ಹಾಗೂ ಹೊರವಲಯದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶದ ಇತರೆ ವಿದ್ಯಾರ್ಥಿಗಳಿಗೆ ಈತನೇ ಮಾರ್ಗದರ್ಶಕನಾಗಿದ್ದ. ಮಾರ್ಗದರ್ಶನದಿಂದ ಹಣ
ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಗುರುತಿನ ಚೀಟಿ ಬಳಸಿ ಆ್ಯಪ್ ಆಧರಿತ ಕ್ಯಾಬ್ ಚಾಲನೆ ಮಾಡುತ್ತಿದ್ದ. ಈ ಮಾಹಿತಿ ಪಡೆದ ಆಂತರಿಕಾ ಭದ್ರತಾ
ವಿಭಾಗದ ಪೊಲೀಸರು ಆರೋಪಿಯ ಮೇಲೆ ಕೆಲ ದಿನಗಳಿಂದಲೂ ನಿಗಾವಹಿಸಿದ್ದರು. ಕೊನೆಗೆ ಆ.22ರಂದು ರಾತ್ರಿ ಕೊಮ್ಮಸಂದ್ರದ ಬಾಡಿಗೆ ಮನೆಯಲ್ಲೇ ಬಂಧಿಸಿದ್ದಾರೆ.