ಬಾಂಗ್ಲಾದಿಂದ ರಾಜ್ಯಕ್ಕೆ ನಕಲಿ ನೋಟು!

Bangladesh Fake Note Seize
Highlights

ರೈಲಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರನ್ನು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ತಪಾಸಣೆಗೆ ಗುರಿಪಡಿಸಿದಾಗ, ಅವರ ಬಳಿ 2000 ರು. ಮುಖಬೆಲೆಯ 510 ನಕಲಿ ನೋಟುಗಳು ಪತ್ತೆಯಾಗಿವೆ.

ಹೈದರಾಬಾದ್: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಳಕೆ ಮಾಡಲೆಂದು ನೆರೆಯ ಬಾಂಗ್ಲಾದೇಶದಿಂದ ತರಿಸಿಕೊಳ್ಳಲಾಗಿದ್ದ 10 ಲಕ್ಷ ರು. ನಕಲಿ ನೋಟುಗಳನ್ನು ವಿಶಾಖಪಟ್ಟಣಂ ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಸಂಬಂಧ ಬೆಂಗಳೂರಿನ ಇಬ್ಬರನ್ನು ಬಂಧಿಸಲಾಗಿದೆ. ಇದರೊಂದಿಗೆ ಮುಂಬರುವ ಚುನಾವಣೆ ವೇಳೆ ನಕಲಿ ನೋಟುಗಳ ಹಾವಳಿ ಇರುವುದು ಖಚಿತವಾಗಿದೆ. ಪಶ್ಚಿಮ ಬಂಗಾಳದ ಹೌರಾ ದಿಂದ ಹೈದರಾಬಾದ್‌ಗೆ ಬರುತ್ತಿದ್ದ ರೈಲಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರನ್ನು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ತಪಾಸಣೆಗೆ ಗುರಿಪಡಿಸಿದಾಗ, ಅವರ ಬಳಿ 2000 ರು. ಮುಖಬೆಲೆಯ 510 ನಕಲಿ ನೋಟುಗಳು ಪತ್ತೆಯಾಗಿವೆ.

ವಿಚಾರಣೆ ವೇಳೆ ಇದನ್ನು ತಾವು ಬಾಂಗ್ಲಾದಿಂದ ಪಡೆದುಕೊಂಡಿದ್ದು, ಮುಂಬರುವ ಕರ್ನಾಟಕ ಚುನಾವಣೆ ವೇಳೆ ಬದಲಾಯಿಸಲು ಯೋಜಿಸಿದ್ದಾಗಿ ಹೇಳಿದ್ದಾರೆ. ಬಾಂಗ್ಲಾದಿಂದ ಭಾರತಕ್ಕೆ ನಕಲಿ ನೋಟು ಸಾಗಣೆ ಯಾಗುವ ಬಂಗಾಳದ ಫರಕ್ಕಾದಲ್ಲಿ ವ್ಯಕ್ತಿಯೊಬ್ಬ ತಮಗೆ ಈ ನೋಟುಗಳನ್ನು ನೀಡಿದ್ದ ಎಂದು ಬಂಧಿತರು ಹೇಳಿದ್ದಾರೆ. ಬಂಧಿತರ ಪೈಕಿ ಒಬ್ಬಾತ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಅಪಹರಣ ಪ್ರಕರಣ ವೊಂದರಲ್ಲಿ ಬಂಧಿತನಾಗಿ ಹಾಲಿ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

loader