ಇಂತಹ 5000ಕ್ಕೂ ಅಧಿಕ ವಲಸಿಗರು, ಮಾರತ್ಹಳ್ಳಿ ಸಮೀಪದ ಪಣತ್ತೂರು ಗ್ರಾಮದ ಬಳಿ 2000ಕ್ಕೂ ಹೆಚ್ಚು ಶೆಡ್ ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಬೆಳಗ್ಗೆಯೆಲ್ಲಾ ನಗರದ ವಿವಿಧೆಡೆ ಚಿಂದಿ ಆಯ್ದು ಜೀವನ ನಡೆಸುವುದರ ಜೊತೆಗೆ ರಾತ್ರಿಯ ಹೊತ್ತಿನಲ್ಲಿ ಬೆಳಗ್ಗೆ ಗುರುತಿಸಿದ ವಸ್ತುಗಳ ಕಳ್ಳತನಕ್ಕೆ ಮುಂದಾಗ್ತಾರೆ. ಅಲ್ಲದೆ ಇದನೇನಾದರು ಪ್ರಶ್ನಿಸಲು ಸಾರ್ವಜನಿಕರು ಮುಂದಾದರೆ ಅವರ ಮೇಲೆ ಗುಂಪು ಕಟ್ಟಿಕೊಂಡು ಜಗಳಕ್ಕೆ ನಿಲ್ಲುವಷ್ಟು ಬೆಳೆದು ನಿಂತಿದ್ದಾರೆ.
ಬೆಳಗ್ಗೆಯೆಲ್ಲಾ ಕೆಲಸ ಮಾಡಿದವರು ರಾತ್ರಿ ನಿದ್ರಿಸಿ ವಿಶ್ರಾಂತಿ ಪಡೆಯುತ್ತಾರೆ ಅಂತ ಸಹಜವಾಗಿಯೇ ವಾಡಿಕೆಯಾಗಿದೆ. ಆದ್ರೆ ಬಾಂಗ್ಲದಿಂದ ಬೆಂಗಳೂರಿಗೆ ಬಂದಿರುವ ವಲಸಿಗರು ಬೆಳಗ್ಗೆಯೆಲ್ಲಾ ಚಿಂದಿ ಆಯ್ದು ರಾತ್ರಿ ವೇಳೆ ಕಳ್ಳತನಕ್ಕೆ ಮುಂದಾಗುತ್ತಿರುವುದು ಬೆಳಕಿಗೆ ಬಂದಿದ್ದು ಅದರ ಒಂದು ರಿಪೋರ್ಟ್ ಇಲ್ಲಿದೆ.
ಇವರೆಲ್ಲರೂ ಬೆಳಗ್ಗೆ ಆಯ್ತು ಅಂದ್ರೆ ಬೆಂಗಳೂರು ನಗರದಲ್ಲಿ ಪೇಪರ್ ಆಯೋರು, ಮೂಲತಃ ಬಾಂಗ್ಲಾದಿಂದ ಬಂದಿರುವ ವಲಸಿಗರು. ಇಂತಹ 5000ಕ್ಕೂ ಅಧಿಕ ವಲಸಿಗರು, ಮಾರತ್ಹಳ್ಳಿ ಸಮೀಪದ ಪಣತ್ತೂರು ಗ್ರಾಮದ ಬಳಿ 2000ಕ್ಕೂ ಹೆಚ್ಚು ಶೆಡ್ ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಬೆಳಗ್ಗೆಯೆಲ್ಲಾ ನಗರದ ವಿವಿಧೆಡೆ ಚಿಂದಿ ಆಯ್ದು ಜೀವನ ನಡೆಸುವುದರ ಜೊತೆಗೆ ರಾತ್ರಿಯ ಹೊತ್ತಿನಲ್ಲಿ ಬೆಳಗ್ಗೆ ಗುರುತಿಸಿದ ವಸ್ತುಗಳ ಕಳ್ಳತನಕ್ಕೆ ಮುಂದಾಗ್ತಾರೆ. ಅಲ್ಲದೆ ಇದನೇನಾದರು ಪ್ರಶ್ನಿಸಲು ಸಾರ್ವಜನಿಕರು ಮುಂದಾದರೆ ಅವರ ಮೇಲೆ ಗುಂಪು ಕಟ್ಟಿಕೊಂಡು ಜಗಳಕ್ಕೆ ನಿಲ್ಲುವಷ್ಟು ಬೆಳೆದು ನಿಂತಿದ್ದಾರೆ.
ಇದರ ನಡುವೆ ಮನೆಗಳು ಹಾಗೂ ತೋಟದ ಮುಂದೆ ಪಂಪ್ ಸೆಟ್ ಗಳಿಗೆ ಹಾಕಲಾಗಿರುವ ವೈರ್ ಗಳನ್ನು ಕದ್ದು ಅದನ್ನು ಮಾರಟ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಅಚ್ಚರಿಯೆಂದ್ರೆ, ಈ ವಲಸಿಗರು ಖಾಲಿ ಜಾಗವನ್ನು ಸ್ಥಳೀಯರಿಂದ ಲಕ್ಷಾಂತರ ರೂಪಾಯಿಗೆ ಬಾಡಿಗೆಗೆ ಪಡೆದಿದ್ದಾರೆ. ಅಲ್ಲದೆ ಸ್ಥಳಿಯ ರಾಜಕಾರಣಿಗಳು ಹಾಗು ಅಧಿಕಾರಿಗಳ ನೆರವಿನಿಂದ, ವೋಟರ್ ಐಡಿ , ಆಧಾರ್ ಕಾರ್ಡ್ ಮಾಡಿಸಿಕೊಂಡು ರಾಜಾ ರೋಷವಾಗಿ ಇಲ್ಲಿನವರೆಂದು ಹೇಳಿಕೊಳ್ಳುತಿದ್ದಾರೆ. ಇದರಿಂದಾಗಿ ಇಲ್ಲಿನ ಸ್ಥಳಿಯ ನಾಗರೀಕರು ನಮ್ಮವರಿಗೆ ಇಲ್ಲಿ ಸರಿಯಾದ ಸಮಯದಲ್ಲಿ ಆಧಾರ್ ಕಾರ್ಡ್ ಮತ್ತು ವೋಟರ್ ಕಾರ್ಡ್ ಸಿಗದಿರುವಾಗ ಬಾಂಗ್ಲದಿಂದ ಬಂದಿರುವ ವಲಸಿಗರಿಗೆ ಹೇಗೆ ಇವೆಲ್ಲವೂ ಸಾಧ್ಯವಾಯಿತು ಅಂತ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಈ ವಿಚಾರವನ್ನು ಪಾಲಿಕೆ ಸದಸ್ಯೆ ಪುಷ್ಪ ಮಂಜುನಾಥ್ ಅವರ ಗಮನಕ್ಕೂ ತಂದಿದ್ದು , ಕೆಲ ದಿನಗಳ ಹಿಂದೆ ವರ್ತೂರು ಪೋಲಿಸರಿಗೆ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇದರ ಹೊರತಾಗಿ ರಹಸ್ಯವಾಗಿ ಬಾಂಗ್ಲಾದಿಂದ ಬಂದಿರುವ ವಲಸಿಗನನ್ನು ಮಾತನಾಡಿಸಿದರೆ, ಸ್ಫೋಟಕ ವಿಚಾರವನ್ನು ಬಹಿರಂಗಗೊಳಿಸಿದ್ದಾನೆ. ಬರೀ ಈ ಪ್ರದೇಶವಲ್ಲದೆ ಬೆಂಗಳೂರು ಹೊರವಲಯದಲ್ಲೂ ಅಧಿಕ ಮಂದಿ ವಲಸಿಗರು ವಾಸಿಸುತ್ತಿದ್ದು , ಈ ದೇಶದ ಗಡಿ ಪ್ರವೇಶಿಸುವಾಗ 500 ರೂಪಾಯಿ ಹಣ ನೀಡಿದ್ರೆ ಹೊಳಗೆ ಬಿಡುತ್ತಾರೆ, ಅದೇ ರೀತಿಯಲ್ಲಿ 6 ತಿಂಗಳಿಗೂ ವರ್ಷಕ್ಕೊ ಬಾಂಗ್ಲಕ್ಕೆ ತೆರಳುವಾಗ ಹಣ ಕೊಟ್ಟು ಬಾಂಗ್ಲಾಕ್ಕೆ ಹೋಗಿ ಬರುತ್ತೀವಿ ಅಂತ ಹೇಳ್ತಾನೆ.
ಒಟ್ಟಾರೆ ಈ ಎಲ್ಲ ಅಂಶವನ್ನು ಗಮನಿಸುವುದಾದರೆ ಬಾಂಗ್ಲಾದಿಂದ ಬಂದು ಚಿಂದಿ ಆಯುವವರು ಕಳ್ಳತನಕ್ಕೆ ಮುಂದಾಗಿದ್ದಾರೆ ಅಂತ ದೂರುವುದನ್ನು ಬಿಟ್ಟು ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಪೋಷಿಸುತ್ತಿರುವವರಿಗೆ ಪಾಠ ಕಲಿಸಬೇಕಿದೆ.
ವರದಿ: ಮಂಜುನಾಥ್ ಆನೇಕಲ್, ಸುವರ್ಣ ನ್ಯೂಸ್
