ಮೇಯರ್ ಅವರ ಈ ಯೋಜನೆಗೆ ಕೆಲ ಟ್ವಿಟರಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲಾಲ್ ಬಾಗನ್ನು ಅದರ ಪಾಡಿಗೆ ಬಿಟ್ಟುಬಿಡಿ ಎಂದೊಬ್ಬರು ಹೇಳಿದರೆ, ಇನ್ನೊಬ್ಬರು ಮೊದಲು ಸಾಯುತ್ತಿರುವ ಕೆರೆಗಳನ್ನು ಉಳಿಸಿ ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರು(ಮೇ.04) ಬೆಂಗಳೂರಿಗರು ಇನ್ಮುಂದೆ ಜಲಪಾತಗಳನ್ನು ನೋಡಲು ನಗರ ಬಿಟ್ಟು ಹೊರಹೋಗಬೇಕಾಗಿಲ್ಲ. ನಗರದಲ್ಲೇ ಮಿನಿ ಜಲಪಾತವನ್ನು ನಿರ್ಮಿಸುವ ಯೋಜನೆ ಬಿಬಿಎಂಪಿ ಹಾಕಿಕೊಂಡಿದೆಯೆಂದು ಮೇಯರ್ ಪದ್ಮಾವತಿ ಹೇಳಿಕೊಂಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗುವುದು ಅಂತಿತಹ ಜಲಪಾತವಲ್ಲ, ಕೆನಾಡದಲ್ಲಿರುವ ವಿಶ್ವವಿಖ್ಯಾತ ನಿಯಗಾರ ಜಲಪಾತವನ್ನೇ ಹೋಲುವ ಮಿನಿಜಲಪಾತವನ್ನು ಲಾಲ್'ಬಾಗ್'ನಲ್ಲಿ ನಿರ್ಮಿಸಲಾಗುವುದೆಂದು ಅವರು ಟ್ವಿಟರ್'ನಲ್ಲಿ ಹೇಳಿಕೊಂಡಿದ್ದಾರೆ.

Scroll to load tweet…

ಮೇಯರ್ ಅವರ ಈ ಯೋಜನೆಗೆ ಕೆಲ ಟ್ವಿಟರಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲಾಲ್ ಬಾಗನ್ನು ಅದರ ಪಾಡಿಗೆ ಬಿಟ್ಟುಬಿಡಿ ಎಂದೊಬ್ಬರು ಹೇಳಿದರೆ, ಇನ್ನೊಬ್ಬರು ಮೊದಲು ಸಾಯುತ್ತಿರುವ ಕೆರೆಗಳನ್ನು ಉಳಿಸಿ ಎಂದು ಸಲಹೆ ನೀಡಿದ್ದಾರೆ. ಹತ್ತಿರದಲ್ಲೇ ಜಗತ್ಪ್ರಸಿದ್ಧ ಜೋಗವಿರುವಾಗ ಇದರ ಅಗತ್ಯವಿದೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.