ಮನೆಯವರೆಲ್ಲ ಹೊರಗಡೆ ಹೋದ ಬಳಿಕ ರಾಮಯ್ಯ ಅವರು ಟಿ.ವಿ.ಯಲ್ಲಿ ಧಾರಾವಾಹಿ ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಳ್ಳನೊಬ್ಬ ಎಂಟ್ರಿ ಕೊಟ್ಟಿದ್ದ
ಬೆಂಗಳೂರು ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ರಾಮಯ್ಯ ಎಂಬುವವರ ಮನೆಮಂದಿ ಸಂಭ್ರಮದಿಂದ ದೀಪಾವಳಿ ಆಚರಿಸಿ ನಂತರ ರಾಮಯ್ಯರನ್ನು ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದಾರೆ. ರಾಮಯ್ಯನವರಿಗೆ ಸ್ವಲ್ಪ ವಯಸ್ಸಾಗಿತ್ತು. ಮನೆಯವರೆಲ್ಲ ಹೊರಗಡೆ ಹೋದ ಬಳಿಕ ರಾಮಯ್ಯ ಅವರು ಟಿ.ವಿ.ಯಲ್ಲಿ ಧಾರಾವಾಹಿ ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಳ್ಳನೊಬ್ಬ ಎಂಟ್ರಿ ಕೊಟ್ಟು 8,000 ರೂ. ನಗದು 55 ಗ್ರಾಂ ಚಿನ್ನಾಭರಣ ದೋಚಿ ಆರಾಮಾಗಿ ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಅವರ ಕುಟುಂಬದವರು ರೂಮಿನ ಬಾಗಿಲು ತೆಗೆದಿರುವುದನ್ನು ನೋಡೊದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ರಾಜಗೋಪಾಲನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾರಾವಾಹಿ ನೋಡುತ್ತಿದ್ದ ರಾಮಯ್ಯನವರಿಗೆ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತೆಯಿಲ್ಲ ಎನ್ನಲಾಗುತ್ತಿದೆ.
