ಬೆಂಗಳೂರು, [ಸೆ.14]: ಬೆಂಗಳೂರಿನ ಬಾಣಸವಾಡಿಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಗೋವಾದಲ್ಲಿ ಪತ್ತೆಯಾಗಿದ್ದಾರೆ.

9ನೆ ತರಗತಿ ವ್ಯಾಸಾಂಗ ಮಾಡುತ್ತಿದ್ದ 15 ವರ್ಷದ ಅಲೆನ್ ಜಾನ್ ಮಾರ್ಕ್ ಮತ್ತು ಮುಂಜುನಾಥ್ ಲಿಂಗರಾಜಪುರದ ಮನೆಯಿಂದ  ಸೆಪ್ಟೆಂಬರ್ 11ರ  ಸಂಜೆ ನಾಪತ್ತೆಯಾಗಿದ್ದರು. 

ಗೋವಾದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ತಿರುಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಪೊಲೀಸರು, ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿಕೊಂಡ  ಬಳಿಕ ಬಾಣಸವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಇಬ್ಬರು ವಿದ್ಯಾರ್ಥಿಗಳನ್ನು ಇದೀಗ ಬಾಣಸವಾಡಿ ಪೊಲೀಸ್ರು ಸುರಕ್ಷಿತವಾಗಿ ಗೋವಾದಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇವರಿಬ್ಬರು ಗೋವಾಕ್ಕೆ ಏಕೆ ಹೋಗಿದ್ದರು ಎನ್ನುವುದಕ್ಕೆ ಕಾರಣ ತಿಳಿದುಬಂದಿಲ್ಲ.  

ವಿದ್ಯಾರ್ಥಿಗಳು ನಾಪತ್ತೆ ಸಂಬಂಧ ಆತಂಕಗೊಂಡಿದ್ದ ಪೋಷಕರು ಬಾಸಣವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.