ನಿನ್ನೆ ಯಲಹಂಕದ ಕೋಗಿಲು ಬಳಿ ಹೋಂಡ ಸಿಟಿಯಲ್ಲಿ ಸೀನ ಹೋಗುತ್ತಿದ್ದಾಗ ಪಲ್ಸರ್ ಬೈಕ್'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈತನ ದೇಹಕ್ಕೆ ಮೂರು ಗುಂಡುಗಳು ತಗುಲಿದ್ದವು. ತಕ್ಷಣ ಈತನನ್ನು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರು(ಫೆ.4): ನಗರದಲ್ಲಿ ನಡೆದ ಫೈರಿಂಗ್'ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಅಲಿಯಾಸ್ ಶ್ರೀನಿವಾಸ್ ಮೂರ್ತಿ ಮೃತಪಟ್ಟಿದ್ದಾನೆ. ನಿನ್ನೆ ಯಲಹಂಕದ ಕೋಗಿಲು ಬಳಿ ಹೋಂಡ ಸಿಟಿಯಲ್ಲಿ ಸೀನ ಹೋಗುತ್ತಿದ್ದಾಗ ಪಲ್ಸರ್ ಬೈಕ್'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈತನ ದೇಹಕ್ಕೆ ಮೂರು ಗುಂಡುಗಳು ತಗುಲಿದ್ದವು. ತಕ್ಷಣ ಈತನನ್ನು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೊಟ್ಟೆಗೆ ಗಂಭೀರ ಗಾಯವಾಗಿದ್ದ ಕಾರಣ ಸೀನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶ್ರೀನಿವಾಸ್ ಮೂರ್ತಿ ಮೂಲತಃ ನೆಲಮಂಗಲದ ಬಳಿಯ ಮಾದನಾಯಕನಹಳ್ಳಿಯವನು. ಶ್ರೀನಿವಾಸ್ ಮೂರ್ತಿ ಹಾಗೂ ಪಾಯ್ಸನ್ ರಾಮ ಇಬ್ಬರೂ ಅಣ್ಣ- ತಮ್ಮಂದಿರು. ಪಾಯ್ಸನ್ ರಾಮನ ವಿರುದ್ಧ ಈಗಾಗಲೇ 40 ಕೇಸ್'ಗಳು ದಾಖಲಾಗಿದ್ದು, ಇವುಗಳಲ್ಲಿ 38 ಕೇಸ್'ಗಳು ಅಣ್ಣ ಶ್ರೀನಿವಾಸ್ ಮೂರ್ತಿಗಾಗಿ ಮಾಡಿದ್ದು ಎಂದು ತಿಳಿದು ಬಂದಿದೆ. ಈ ಪಾಯ್ಸನ್ ರಾಮ ಅಣ್ಣ ಶ್ರೀನಿವಾಸ್ ಮೂರ್ತಿಯ ಬೆನ್ನೆಲುಬಾಗಿ ನಿಂತಿದ್ದ. ಇವರಿಬ್ಬರೂ ಮಾದನಾಯಕನಹಳ್ಳಿ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ. ನಿನ್ನೆ ಅಣ್ಣನನ್ನು ನೋಡಲು ಬಂದಾಗ ಪಾಯ್ಸನ್ ರಾಮನನ್ನು ಪೊಲೀಸರು ಬಂಧಿಸಿದ್ದರು.
