ಐಪಿಸಿ (ಭಾರತೀಯ ಅಪರಾಧ ದಂಸಂಹಿತೆ) ಅಪರಾಧಗಳ ಸಂಖ್ಯೆಯಲ್ಲಿ ಭೂಗತ ಲೋಕಕ್ಕೆ ಹೆಸರುವಾಸಿಯಾಗಿರುವ ವಾಣಿಜ್ಯ ರಾಜಧಾನಿ ಮುಂಬೈ ಮಹಾ ನಗರಿಯನ್ನೇ ಹಿಂದಿಕ್ಕಿರುವ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ.
ನವದೆಹಲಿ(ಡಿ.1): ದೇಶದ ‘ಐಟಿ ರಾಜಧಾನಿ’ ಎಂದೇ ಬಿರುದಾಂಕಿತವಾಗಿರುವ ಬೆಂಗಳೂರು ಅಪರಾಧ ಲೋಕದ ರಾಜಧಾನಿಯಾಗುವತ್ತ ದಾಪುಗಾಲು ಇಡುತ್ತಿರುವ ಆತಂಕಕಾರಿ ಲಕ್ಷಣ ರಾಷ್ಟ್ರೀಯ ಅಪರಾಧ ದಾಖಲೆಗಳ ದಳ (ಎನ್'ಸಿಆರ್‌ಬಿ) ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಗೋಚರಿಸಿದೆ. ಐಪಿಸಿ (ಭಾರತೀಯ ಅಪರಾಧ ದಂಸಂಹಿತೆ) ಅಪರಾಧಗಳ ಸಂಖ್ಯೆಯಲ್ಲಿ ಭೂಗತ ಲೋಕಕ್ಕೆ ಹೆಸರುವಾಸಿಯಾಗಿರುವ ವಾಣಿಜ್ಯ ರಾಜಧಾನಿ ಮುಂಬೈ ಮಹಾ ನಗರಿಯನ್ನೇ ಹಿಂದಿಕ್ಕಿರುವ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ.
ಅಪಹರಣದಲ್ಲಿ ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ಬಿಹಾರ ರಾಜಧಾನಿ ಪಾಟ್ನಾವನ್ನು ಹಿಂದಿಕ್ಕಿ, ಎರಡನೇ ಸ್ಥಾನಕ್ಕೇರಿದೆ!
20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ 19 ನಗರಗಳಲ್ಲಿ 2016ರಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ವಿಶ್ಲೇಷಿಸಿ ಎನ್‌ಸಿಆರ್‌ಬಿ ವರದಿ ತಯಾರಿಸಿದ್ದು, ಅದು ಗುರುವಾರ ಬಿಡುಗಡೆಯಾಗಿದೆ. ಅದರಲ್ಲಿರುವ ಮಾಹಿತಿ ಪ್ರಕಾರ ಕೊಲೆ, ಅತ್ಯಾಚಾರ, ಅಪಹರಣ, ಆರ್ಥಿಕ ಅಪರಾಧ, ಬಾಲಾಪರಾಧಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಪ್ರಥಮ ಸ್ಥಾನಕ್ಕೇರುವ ಮೂಲಕದೇಶದ ‘ಕ್ರೈಮ್ ಸಿಟಿ’ಯಾಗಿ ಹೊರಹೊಮ್ಮಿದೆ.
