ಬೆಂಗಳೂರು[ಏ.21]: ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಜನರಲ್ಲಿ ಸಂತಸ ಮೂಡಿಸಿದೆ. ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಿದೆ ಎಂಬುವುದು ಹಲವರ ಮಾತಾಗಿದೆ. ಆದರೆ ಮಾಗಡಿ ನಿವಾಸಿ ಮಂಜುನಾಥ್ ಮಾತ್ರ ನಮ್ಮ ಮೆಟ್ರೋನ ಪ್ಲಾಟ್ ಫಾರಂನಿಂದ ಬೇಸತ್ತಿದ್ದು, ಮಿದರ ವಿರುದ್ಧ ಪೊಲೀಸರುಗೆ ದೂರು ಸಲ್ಲಿಸಿದ್ದಾರೆ.

ಹೌದು ನಗರದ ನಿವಾಸಿ ಮಂಜುನಾಥ್ ಎಂಬವರು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ನಮ್ಮ ಮೆಟ್ರೋ ಪ್ಲಾಟ್ಫಾರಂ ಕುರಿತಾಗಿ ದೂರು ದಾಖಲಿಸಿದ್ದಾರೆ. ಮಾ. 6ರಂದು ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಲು ಹೋಗುವಾಗ ಇವರು  ಜಾರಿ ಬಿದ್ದು ಕೈ ಮೂಳೆ ಮುರಿದು ಕೊಂಡಿದ್ದರು. ಹೀಗಾಗಿ ಕೆಂಪು ಗ್ರಾನೈಟ್ ತುಂಬಾ ಜಾರುತ್ತದೆ ಎಂದು ದೂರು ದಾಖಲಿಸಿದ್ದಾರೆ. ಈ ಕಂಪ್ಲೇಂಟ್ ನಲ್ಲಿ ಮಾಗಡಿ ರಸ್ತೆ ಮೆಟ್ರೋ ಸ್ಟೇಷನ್ ಮ್ಯಾನೇಜರ್ ಪ್ರಮುಖ ಆರೋಪಿ ಎಂದೂ ಉಲ್ಲೇಖಿಸಿದ್ದಾರೆ

ನಗರಾಭಿವೃದ್ಧಿ ಇಲಾಖೆಗೂ ಪತ್ರ ಬರೆದಿರುವ ಮಂಜುನಾಥ್, ಮೆಟ್ರೋ ಪ್ಲಾಟ್ ಫಾರಂನಲ್ಲಿ ಕೈ ಮುರಿದುಕೊಂಡ ತನಗೆ 2 ಲಕ್ಷ ಖರ್ಚಾಗಿದೆ, ಖರ್ಚು ಭರಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28