Asianet Suvarna News Asianet Suvarna News

'ಸ್ಟೀಲ್ ಬ್ರಿಡ್ಜ್ ಬೇಡ' ಎನ್ನುತ್ತಿದೆ ಬೆಂಗಳೂರು...!

ನಮ್ಮ ಬೆಂಗಳೂರು ಫೌಂಡೇಷನ್  ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ 4 ಕಡೆ ಪ್ರತಿಭಟನೆ ನಡೆಯುತ್ತಿದೆ. ಧರಣಿಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್​​ ಹೆಗ್ಡೆ, ‌ ನಮ್ಮ ಬೆಂಗಳೂರು ಫೌಂಡೇಷನ್​ ಕಾರ್ಯಕರ್ತರು, ಕಲಾವಿದ ಪ್ರಕಾಶ ಬೆಳವಾಡಿ, ಹಲವು ಪರಿಸರವಾದಿಗಳು ಭಾಗಿಯಾಗಿದ್ದಾರೆ. 

bangalore protest Steel Bridge

ಬೆಂಗಳೂರು(ಅ.16): ಬಿಡಿಎ ಕೈಗೆತ್ತಿಗೊಂಡಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಗರದ ದ ಚಾಲುಕ್ಯ ವೃತ್ತದಲ್ಲಿ ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕೆ ವಿರೋಧಿಸಿ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. 

ನಮ್ಮ ಬೆಂಗಳೂರು ಫೌಂಡೇಷನ್  ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ 4 ಕಡೆ ಪ್ರತಿಭಟನೆ ನಡೆಯುತ್ತಿದೆ. ಧರಣಿಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್​​ ಹೆಗ್ಡೆ, ‌ ನಮ್ಮ ಬೆಂಗಳೂರು ಫೌಂಡೇಷನ್​ ಕಾರ್ಯಕರ್ತರು, ಕಲಾವಿದ ಪ್ರಕಾಶ ಬೆಳವಾಡಿ, ಹಲವು ಪರಿಸರವಾದಿಗಳು ಭಾಗಿಯಾಗಿದ್ದಾರೆ. 

ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕಾಗಿ ನಗರದ ನೂರಾರು ಮರ ನಾಶವಾಗುತ್ತಿವೆ.  ಯೋಜನೆಯಲ್ಲಿ ಪಾರದರ್ಶಕತೆ ಕಂಡು ಬರುತ್ತಿಲ್ಲ ಎಂಬುದು ಪರಿಸರವಾದಿಗಳ ಆರೋಪವಾಗಿದೆ. 

ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದು, ನಮ್ಮ ಸಂಸ್ಕೃತಿ ಹಾಳು ಮಾಡಲು ಸರ್ಕಾರ ಮುಂದಾಗಿದೆ  ಎಂದಿದ್ದಾರೆ. 

ಬೆಂಗಳೂರು ನಗರ ಬೆಂಗಳೂರು ನಾಗರಿಕರ ಸ್ವತ್ತ ಆಗಿದ್ದು, ಜನಾಭಿಪ್ರಾಯ ಪಡೆಯದೆ ಸರ್ಕಾರ ಯೋಜನೆಗೆ ಕೈಹಾಕುತ್ತಿದೆ ಎಂದಿರುವ  ಅವರು, ಬಿಲ್ಡರ್ಸ್, ಟಿಂಬರ್ ಮಾಫಿಯಾಗೆ ಸರ್ಕಾರ ನೆರವಾಗುತ್ತಿದೆ, ಸರ್ಕಾರ ವಿದೇಶಿ ಸಂಸ್ಕೃತಿಯನ್ನು ತರಲು ಹೊರಟಿದೆ . ಕೂಡಲೇ ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಡಬೇಕು ಎಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ. 

ಸರ್ಕಾರ ತರಾತುರಿಯಲ್ಲಿ ಉಕ್ಕಿನ ಸೇತುವೆ ಮಾಡಲು ಮುಂದಾಗಿದೆ. ಇದಕ್ಕೂ ಮೊದಲು ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಬೇಕಿತ್ತು ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಸರಕಾರಿ ಇಲಾಖೆಗಳೊಂದಿಗೆ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಜಾರಿ ಮಾಡಲು ಹೊರಟಿರುವುದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸದಸ್ಯ ಪ್ರಕಾಶ್‌ ಬೆಳವಾಡಿ ತಿಳಿಸಿದ್ದಾರೆ.

ಉಕ್ಕಿನ ಸೇತುವೆ ನಿರ್ಮಾಣಕ್ಕೆ ನಗರದ ಸಾರ್ವಜನಿಕರು, ಜನಪ್ರತಿನಿಧಿಗಳು, ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಮೊಂಡುತನವನ್ನು ಬಿಡದೇ ಮುಂದುವರಿದಿರುವುದು ಸರಿಯಲ್ಲ. ಆದುದರಿಂದ ಶಾಸಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಿ, ಚರ್ಚಿಸಿ ಸಲಹೆ ನೀಡಿ. ನಂತರ ಅದನ್ನು ಸಾರ್ವಜನಿಕರ ಮುಂದಿಟ್ಟು ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

 

Follow Us:
Download App:
  • android
  • ios