ನಂದಿನಿ‌ ಅವರು ತಮ್ಮ ಗೋಹತ್ಯೆಯ ಬಗ್ಗೆ ದೂರು ನೀಡಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆದಿದೆ ಅಂತ ದೂರು‌ ನೀಡಿದ್ದರು. ಈ ಕುರಿತು ತನಿಖೆ ನಡೆಯುತ್ತಿದೆ.
ಬೆಂಗಳೂರು(ಅ.18): ಟೆಕ್ಕಿ ನಂದಿನಿ ಅವರ ಮೇಲೆ ಅಪಘಾತಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದ್ದು, ಕಸಾಯಿಖಾನೆ ವಿರುದ್ಧ ದೂರು ನೀಡಿದ್ದಕ್ಕೆ ಹಲ್ಲೆ ಆಗಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಅವರು ತಮ್ಮ ಗೋಹತ್ಯೆಯ ಬಗ್ಗೆ ದೂರು ನೀಡಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆದಿದೆ ಅಂತ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಯುತ್ತಿದೆ. ಈ ಸಂಬಂಧ 13 ಆರೋಪಿಗಳನ್ನು ಬಂಧಿಸಿ ಮೂರು ಹಸುಗಳ ರಕ್ಷಣೆ ಮಾಡಲಾಗಿದೆ. "ಪಾಕಿಸ್ತಾನ್ ಜಿಂದಾಬಾದ್" ಅಂತ ಘೋಷಣೆ ಕೂಗಿರುವದಾಗಿ ನಂದಿನಿ ಆರೋಪ ಮಾಡಿದ್ದರು. ಇದು ಸುಳ್ಳು ಆ ರೀತಿ ಯಾರು ಘೋಷಣೆ ಕೂಗಿಲ್ಲ' ಎಂದು ಸ್ಪಷ್ಟಪಡಿಸಿದರು.
ಕೋರ್ಟ್ ಕಮಿಷನ್ ಸದಸ್ಯರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ 10 ಮಂದಿ ಆರೋಪಿಗಳನ್ನು ಬಂಧಿಸಿ 1 ಟಾಟಾ ಟರ್ಬೋ, 407 ಕ್ಯಾಂಟರ್ ಹಾಗೂ 4 ದನಗಳನ್ನು ರಕ್ಷಿಸಲಾಗಿದೆ' ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
