ಬೆಂಗಳೂರು ಹಾಗೂ ಕೋಲಾರಗಳಲ್ಲಿ ಗುಡುಗು, ಮಿಂಚುಗಳಿಂದ ಕೂಡಿದ ಮಳೆಯಾಗುವುದು ಬಹುತೇಕ ನಿಶ್ಚಿತ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ. ಒಂದು ರಾತ್ರಿಯ ಮಳೆಯ ಹೊಡೆತಕ್ಕೆ ಜರ್ಝರಿತವಾಗಿರುವ ಬೆಂಗಳೂರು ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆಯನ್ನು ತಡೆದುಕೊಳ್ಳಬಲ್ಲುದೇ ಎಂಬುದು ಮುಖ್ಯಪ್ರಶ್ನೆಯಾಗಿದೆ.

ಬೆಂಗಳೂರು(ಆ. 15): ಕಳೆದೊಂದು ರಾತ್ರಿಯಲ್ಲಿ ಬಿದ್ದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿಹೋಗಿದೆ. ಹಲವು ಪ್ರದೇಶಗಳು ನೀರಿನಲ್ಲಿ ಅಕ್ಷರಶಃ ಮುಳುಗಡೆಯಾಗಿಬಿಟ್ಟಿದೆ. ಕಾರು ಸೇರಿದಂತೆ ವಾಹನಗಳು ರಸ್ತೆಗಳಲ್ಲಿ ನಿಂತುಬಿಟ್ಟಿವೆ. ಈಗ ಇನ್ನೂ ಎರಡು ದಿನ ಬೆಂಗಳೂರಿಗೆ ಮಳೆ ರಾಚುತ್ತದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಹಾಗೂ ಕೋಲಾರಗಳಲ್ಲಿ ಗುಡುಗು, ಮಿಂಚುಗಳಿಂದ ಕೂಡಿದ ಮಳೆಯಾಗುವುದು ಬಹುತೇಕ ನಿಶ್ಚಿತ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ. ಒಂದು ರಾತ್ರಿಯ ಮಳೆಯ ಹೊಡೆತಕ್ಕೆ ಜರ್ಝರಿತವಾಗಿರುವ ಬೆಂಗಳೂರು ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆಯನ್ನು ತಡೆದುಕೊಳ್ಳಬಲ್ಲುದೇ ಎಂಬುದು ಮುಖ್ಯಪ್ರಶ್ನೆಯಾಗಿದೆ.

ನಿನ್ನೆ ರಾತ್ರಿ ಸುರಿದ ಮಳೆಯು ಕಳೆದ 126 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ್ದೆನ್ನಲಾಗಿದೆ.