ಸಕಲೇಶಪುರ [ಜು.26]: ಇಲ್ಲಿಗೆ ಸಮೀಪದ ಸಿರಿಬಾಗಿಲು ಪ್ರದೇಶದಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲುಗಳ ಸಂಚಾರ ಗುರುವಾರದಿಂದ ಪುನರ್‌ ಆರಂಭಿಸಲಾಗಿದೆ. 

ಸಿರಿಬಾಗಿಲು ಸಮೀಪದ 86ನೇ ಮೈಲುಗಲ್ಲಿನ ಸುರಂಗದ ಸಮೀಪ ರೈಲು ಹಳಿಗಳ ಮೇಲೆ ಶನಿವಾರ ಮುಂಜಾನೆ ಬಂಡೆ, ಮಣ್ಣು ರಾಶಿಯಾಗಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. 

ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಸತತ 5 ದಿನ ನಡೆಸಿದ ಕಾರ್ಯಾಚರಣೆ ನಂತರ ಗುರುವಾರ ಮುಂಜಾನೆಯಿಂದ ರೈಲು ಸಂಚಾರ ಪುನರ್‌ ಆರಂಭವಾಗಿದೆ.