ಐಟಿ ರಾಜಧಾನಿ ಖ್ಯಾತಿಯ ಬೆಂಗಳೂರು ಈಗ ದೇಶದ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಮತ್ತು ನವದೆಹಲಿ ಮೊದಲ ಎರಡು ಸ್ಥಾನಗಳಲ್ಲಿ ಇವೆ.

ಬೆಂಗಳೂರು(ಸೆ.26): ಐಟಿ ರಾಜಧಾನಿ ಖ್ಯಾತಿಯ ಬೆಂಗಳೂರು ಈಗ ದೇಶದ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಮತ್ತು ನವದೆಹಲಿ ಮೊದಲ ಎರಡು ಸ್ಥಾನಗಳಲ್ಲಿ ಇವೆ.

ಸೋಮವಾರ ಬಿಡುಗಡೆ ಮಾಡಿರುವ ‘ಹುರುನ್‌ ಇಂಡಿಯಾ ಶ್ರೀಮಂತರ ಪಟ್ಟಿ 2017’ ಪ್ರಕಾರ, ಬೆಂಗಳೂರಿನಲ್ಲಿ ಕನಿಷ್ಠ 1,000 ಕೋಟಿಗಳಷ್ಟು ಸಂಪತ್ತು ಹೊಂದಿದ 51 ಮಂದಿ ಕುಬೇರರು ಇದ್ದಾರೆ. ಈ ಪಟ್ಟಿಯಲ್ಲಿ 23 ಮಂದಿ ಶ್ರೀಮಂತರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿಪ್ರೊದ ಅಜೀಮ್‌ ಪ್ರೇಮ್‌ಜಿ 79,300 ಕೋಟಿಗಳ ಸಂಪತ್ತಿನ ಒಡೆಯರಾಗಿದ್ದು, ದೇಶಿ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಇದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ಎಂಬಸ್ಸಿ ಪ್ರಾಪರ್ಟಿ ಡೆವೆಲಪ್‌ಮೆಂಟ್ಸ್‌ನ ಜಿತೇಂದ್ರ ವಿರ್ವಾನಿ ದ್ವಿತೀಯ ಸ್ಥಾನದಲ್ಲಿದ್ದು, 17,600 ಕೋಟಿ ಹೊಂದಿದ್ದಾರೆ. ನಂತರದ ಸ್ಥಾನಗಳಲ್ಲಿ ಬಯೊಕಾನ್‌ನ ಕಿರಣ್‌, ಮಜುಂದಾರ್‌ ಷಾ 15,400 ಕೋಟಿ ಮತ್ತು ಮಣಿಪಾಲ್‌ ಎಜುಕೇಷನ್‌ ಆ್ಯಂಡ್‌ ಮೆಡಿಕಲ್‌ನ ರಂಜನ್‌ ಪೈ 8,400 ಕೋಟಿ ಒಡೆಯರಾಗಿದ್ದಾರೆ.