ಬೆಂಗಳೂರು ಯುವತಿಯರಿಗೆ ಮಾತ್ರವಲ್ಲ, ಹುಡುಗರಿಗೂ ಸೇಫ್ ಅಲ್ಲ. ರಾತ್ರಿ ವೇಳೆ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವವರೇ ಹುಷಾರ್, ಯಾಕಂದ್ರೆ ಬೆಂಗಳೂರಿನಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಬೆಂಗಳೂರು(ಮಾ.25): ಬೆಂಗಳೂರು ಯುವತಿಯರಿಗೆ ಮಾತ್ರವಲ್ಲ, ಹುಡುಗರಿಗೂ ಸೇಫ್ ಅಲ್ಲ. ರಾತ್ರಿ ವೇಳೆ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವವರೇ ಹುಷಾರ್, ಯಾಕಂದ್ರೆ ಬೆಂಗಳೂರಿನಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಮಾಜಿ ಕಾರ್ಪೋರೇಟರ್ ದೊಡ್ಡಣ್ಣ ಮನೆ ಮುಂದೆಯೇ ದರೋಡೆ ನಡೆದಿದೆ. ಬೈಕ್‌'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ದಾರಿಯಲ್ಲಿ ಹೋಗುತ್ತಿದ್ದ ಯುವಕನನ್ನು ನೂಕಿ ಬೀಳಿಸಿದ್ದಾರೆ.ಬಳಿಕ ಚಾಕು ತೋರಿಸಿ, ಮೊಬೈಲ್, ಪರ್ಸ್ ಕದ್ದು ಪರಾರಿಯಾಗಿದ್ದಾರೆ. ಫೆಬ್ರವರಿ 9 ರಂದು ವಿಜಯನಗರದ ಅತ್ತಿಗುಪ್ಪೆಯ ಪೆಟ್ರೋಲ್ ಬಂಕ್ ಬಳಿ ಈ ದರೋಡೆ ನಡೆದಿದೆ. ದರೋಡೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.