ನಗರದ ಶಿವಾನಂದ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆ ಮಳೆರಾಯ ತಂಪೆರೆದಿದ್ದಾನೆ.
ಬೆಂಗಳೂರು(ಡಿ.01): ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರಕ್ಕಿಂದು ಮಳೆರಾಯನ ಸಿಂಚನವಾಗಿದೆ.
ನಗರದ ಶಿವಾನಂದ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆ ಮಳೆರಾಯ ತಂಪೆರೆದಿದ್ದಾನೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ತಮಿಳುನಾಡು, ಪಾಂಡಿಚೇರಿಗೆ 'ನಾಡಾ' ಚಂಡಮಾರುತ ಬೀಸುವ ಭೀತಿ ಎದುರಾಗಿತ್ತು. ಸಂಜೆಯಾಗುತ್ತಲೇ ಮೋಡ ಕವಿದ ವಾತಾವರಣ ಉಂಟಾಗಿತ್ತು ಮಳೆ ಬರುವ ಕುರಿತಂತೆ ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿತ್ತು.