ಪೊಲೀಸರ ಪ್ಲಾನ್ ಬುಡುಮೇಲು ಮಾಡಲು ರೌಡಿಗಳು ಪ್ರತಿತಂತ್ರ ನಡೆಸುವ ವೇಳೆ ರೌಡಿಗಳ ಪ್ಲಾನ್ ನನ್ನು ಬೆಂಗಳೂರು ಪೊಲೀಸರು ವಿಫಲಗೊಳಿಸಿದ್ದಾರೆ.
ಬೆಂಗಳೂರು ಅಂಡರ್ವರ್ಲ್ಡ್ ಮಟ್ಟಹಾಕಲು ಪೊಲೀಸರು ಪ್ಲಾನ್ ಮಾಡ್ತಿದ್ದರೆ , ಬೆಂಗಳೂರು ಪೊಲೀಸರ ಮೇಲೆ ದಾಳಿ ಮಾಡಲು ರೌಡಿಗಳು ಸಂಚು ರೂಪಿಸಿದ್ದರು. ಪೊಲೀಸರ ಪ್ಲಾನ್ ಬುಡುಮೇಲು ಮಾಡಲು ರೌಡಿಗಳು ಪ್ರತಿತಂತ್ರ ನಡೆಸುವ ವೇಳೆ ರೌಡಿಗಳ ಪ್ಲಾನ್ ನನ್ನು ಬೆಂಗಳೂರು ಪೊಲೀಸರು ವಿಫಲಗೊಳಿಸಿದ್ದಾರೆ. ಬೆಂಗಳೂರಿನ ಹೊರವಲಯದ ಅಪಾರ್ಟ್ಮೆಂಟ್ ವೊಂದರಲ್ಲಿ 20 ಕ್ಕೂ ಹೆಚ್ಚು ರೌಡಿಗಳು ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮೀಟಿಂಗ್ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 16 ರೌಡಿಗಳು ಪರಾರಿಯಾಗಿ ನಾಲ್ವರು ಮಾತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿಯಾದ ಹಿನ್ನೆಲೆಯಲ್ಲಿ ರೌಡಿಗಳು , ಬೆಂಗಳೂರಲ್ಲಿ ಶಾಂತಿ ಕದಡುವುದು ಮತ್ತು ಪೊಲೀಸರನ್ನ ಟಾರ್ಗೆಟ್ ಮಾಡುವ ಬಗ್ಗೆ ಚರ್ಚೆ ನಡೆಸಿತ್ತಿದ್ದರು .
