2017ರ ಪ್ರೋ ಕಬಡ್ಡಿ ಲೀಗ್'ನಲ್ಲಿ ಬೆಂಗಳೂರು ಬುಲ್ಸ್ ಶುಭಾರಂಭ ಮಾಡಿದೆ. ನಿನ್ನೆ ನಡೆದ ತೆಲುಗು ಟೈಟನ್ಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಅದ್ಭುತ ಆಟವಾಡಿದ ರೋಹಿತ್ ಪಡೆ 31-21 ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು.
ಹೈದರಾಬಾದ್(ಜು.31): 2017ರ ಪ್ರೋ ಕಬಡ್ಡಿ ಲೀಗ್'ನಲ್ಲಿ ಬೆಂಗಳೂರು ಬುಲ್ಸ್ ಶುಭಾರಂಭ ಮಾಡಿದೆ. ನಿನ್ನೆ ನಡೆದ ತೆಲುಗು ಟೈಟನ್ಸ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಅದ್ಭುತ ಆಟವಾಡಿದ ರೋಹಿತ್ ಪಡೆ 31-21 ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು.
ನಾಗ್ಪುರದ ಇಂಡೋರ್ ಸ್ಟೇಡಿಯಂನಲ್ಲಿ ನಿನ್ನೆ ಬೆಂಗಳೂರು ಹುಡುಗರದ್ದೇ ಹವಾ. ತೆಲುಗು ಟೈಟಾನ್ಸ್ ವಿರುದ್ಧ ಮೊದಲ ಲೀಗ್ ಪಂದ್ಯವಾಡಿದ ಬೆಂಗಳೂರು ಬುಲ್ಸ್. ಗೂಳಿಯಂತೆ ನುಗ್ಗಿ ಜಯದ ನಗೆ ಬೀರಿ ಶುಭಾರಂಭ ಮಾಡಿದೆ.
ಬೆಂಗಳೂರು ಬುಲ್ಸ್ ನಾಯಕ ರೋಹಿತ್ ಕುಮಾರ್ ಸವಾರಿಗೆ ಎದುರಾಳಿಗಳು ಪತರಗುಟ್ಟಿದರು. ರೋಹಿತ್ ಆಕರ್ಶಕ ರೈಡಿಂಗ್ನಿಂದ ಪಂದ್ಯದ 12.30 ನಿಮಿಷದಲ್ಲೇ ತೆಲುಗು ಟೈಟನ್ಸ್ ಆಲೌಟ್ ಆಯ್ತು. ಇದೇ ಹುಮ್ಮಸ್ಸಿನಲ್ಲಿ ಬೆಂಗಳೂರು ಹುಡುಗರು ಪಂದ್ಯದಲ್ಲಿ ಮತ್ತಷ್ಟು ಹಿಡಿತ ಸಾಧಿಸಿದರು. ಬೆಂಗಳೂರು ಮೊದಲಾರ್ಧದಲ್ಲಿ 15-09 ಅಂಕಗಳ ಮುನ್ನಡೆ ಪಡೆಯಿತು.
ಆ ನಂತರವೂ ರೋಹಿತ್ ಹುಡುಗರದ್ದೇ ಪಾರುಪತ್ಯ. ರಾಹುಲ್ ಚೌದರಿ ಹುಡುಗರ ದುರ್ಬಲ ಡಿಫೆಂಡನ್ನು ಚೆನ್ನಾಗೇ ಎನ್ಕ್ಯಾಶ್ ಮಾಡಿಕೊಂಡರು. ಪಂದ್ಯದ 37ನೇ ನಿಮಿಷದಲ್ಲಿ ಅಜಯ್ ಸೂಪರ್ ರೈಡ್, ತೆಲುಗು ಟೈಟಾನ್ಸ್ ಕಮ್ಬ್ಯಾಕ್ ಆಸೆಗೆ ತಣ್ಣೀರು ಎರಚಿದರು.
ಹೀಗೆ ಬೆಂಗಳೂರು ಬುಲ್ಸ್ ಬ್ಯಾಕ್ ಟು ಬ್ಯಾಕ್ ಉತ್ತಮ ಪರ್ಫಾಮೆನ್ಸ್ ನಿಂದ 38ನೇ ನಿಮಿಷದಲ್ಲಿ 2ನೇ ಬಾರಿಗೆ ಆಲೌಟ್ ಆಯ್ತು. ಅಂತಿಮವಾಗಿ ರೋಹಿತ್ ಟೀಂ 31-21 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ. ಟೂರ್ನಿಯಲ್ಲಿ ಶುಭಾರಂಭ ಮಾಡ್ತು.
