ರಾಜ್ಯ ಸೇರಿ ರಾಷ್ಟ್ರವ್ಯಾಪ್ತಿ ಏಕಕಾಲಕ್ಕೆ ಗಣತಿ ನಡೆಸಲಾಗುತ್ತಿದೆ. ಹುಲಿಗಣತಿ ಹಿನ್ನೆಲೆಯಲ್ಲಿ ಜ.7 ರಿಂದ 13ರವರೆಗೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿಯನ್ನು ರದ್ದು ಮಾಡಲಾಗಿದೆ.
ಗುಂಡ್ಲುಪೇಟೆ(ಜ.04): ರಾಜ್ಯದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ಬಂಡೀಪುರದಲ್ಲಿ 2018ನೇ ಸಾಲಿನ ಹುಲಿಗಣತಿ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಇದೇ ಮೊದಲ ಬಾರಿಗೆ ಹುಲಿ ಅಭಯಾರಣ್ಯಗಳ ಜೊತೆ ರಕ್ಷಿತಾರಣ್ಯಗಳಲ್ಲಿ ಸಮೀಕ್ಷೆ ನಡೆಯಲಿದೆ. ಹುಲಿಗಳ ಜೊತೆಗೆ ಸಸ್ಯಾಹಾರಿ ಪ್ರಾಣಿಗಳ ಗಣತಿಯೂ ನಡೆಯಲಿದೆ.
ನಾಲ್ಕು ಹಂತಗಳಲ್ಲಿ ಗಣತಿ ನಡೆಯಲಿದ್ದು ಮೊದಲ ಹಂತದಲ್ಲಿ ಜ.7 ರಿಂದ 13ರವರೆಗೆ ರಕ್ಷಿತಾರಣ್ಯ ಪ್ರದೇಶದಲ್ಲಿ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಜೀವಿಗಳ ಸರ್ವೆ ಹಾಗೂ ಆವಾಸ ಸ್ಥಾನಗಳ ಗುಣಮಟ್ಟದ ಅಧ್ಯಯನ ನಡೆಯುವ ಸಾಧ್ಯತೆ ಇದೆ. ರಾಜ್ಯ ಸೇರಿ ರಾಷ್ಟ್ರವ್ಯಾಪ್ತಿ ಏಕಕಾಲಕ್ಕೆ ಗಣತಿ ನಡೆಸಲಾಗುತ್ತಿದೆ. ಹುಲಿಗಣತಿ ಹಿನ್ನೆಲೆಯಲ್ಲಿ ಜ.7 ರಿಂದ 13ರವರೆಗೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿಯನ್ನು ರದ್ದು ಮಾಡಲಾಗಿದೆ. ಹುಲಿಗಳ ನಿಖರತೆ ಕಂಡು ಹಿಡಿಯಲು ಅಡಚಣೆ ಆಗಬಾರದು ಎಂದು ಸಫಾರಿ ಬಂದ್ ಮಾಡಲಾಗಿದೆ.
