ಗುಂಡ್ಲುಪೇಟೆ (ಮಾ. 04): ಹುಲಿಗಳು ನಾಡಿನತ್ತ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಬಂಡೀಪುರ ಅರಣ್ಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಬಂಧಿತ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಮತ್ತೊಬ್ಬ ಆರೋಪಿ ನನ್ನ ಮೈಮೇಲೆ ಮಹದೇಶ್ವರ ಬರುತ್ತಾನೆ ಎಂದು ಅಭಿನಯ ಮಾಡಿ ಬೆಂಕಿ ಹಚ್ಚಿರುವ ಬಗ್ಗೆ ಬಾಯಿ ಬಿಟ್ಟಿಲ್ಲ ಎಂದು ತಿಳಿದುಬಂದಿದೆ.

ಬಂಡೀಪುರ ಬೆಂಕಿ ಆರಿಸಿದ ರಿಯಲ್ ಹೀರೋಗಳ ರೋಚಕ ಕತೆ

ಇತ್ತೀಚೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಬೆಂಕಿ ತಗುಲಿ 15 ಸಾವಿರ ಎಕರೆಗೂ ಹೆಚ್ಚು ಅರಣ್ಯ ನಾಶವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯ ಹನುಮಯ್ಯ ಹಾಗೂ ಗೋಪಯ್ಯ ಹುಲಿಗಳು ನಾಡಿನತ್ತ ಬರುವುದನ್ನು ತಡೆಯುವ ಉದ್ದೇಶದಿಂದ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಡ್ಗಿಚ್ಚು ಆರಿಸಲು ಬಂದವರ ನೆರವಿಗೆ ನಿಂತ ಪರಿಸರ ಪ್ರೇಮಿಗೊಂದು ಸೆಲ್ಯೂಟ್

ಮತ್ತೋರ್ವ ಆರೋಪಿ ಕಳ್ಳೀಪುರ ಅರುಣ್‌ ಕುಮಾರ್‌ ತನ್ನ ಮೈಮೇಲೆ ಮಹದೇಶ್ವರ ಬರುತ್ತಾನೆ ಎಂದು ಅಭಿನಯ ಮಾಡಿದ್ದು, ಬೆಂಕಿ ಹಚ್ಚಿರುವ ಬಗ್ಗೆ ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ. ಈ ಕುರಿತು ಗೋಪಾಲಸ್ವಾಮಿ ಬೆಟ್ಟದ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದು, ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಕಳ್ಳೀಪುರ ಅರುಣ್‌ ಕುಮಾರ್‌ ಬೆಂಕಿ ಹಚ್ಚಿದ ಸಂಬಂಧ ಸ್ಪಷ್ಟವಾದ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.