ಕಲಬುರಗಿ/ಚಿಂಚೋಳಿ: ಮೇ 23ರ ನಂತರ ರಾಜ್ಯದ ದೋಸ್ತಿ ಸರ್ಕಾರ ಪತನವಾದ್ರೆ ನಾನೇ ರಾಜಕೀಯ ನಿವೃತ್ತಿ  ಪಡಿತೀನಿ, ಬೀಳದೆ ಹೋದ್ರೆ ಬಿಜೆಪಿಯವರು ರಾಜಕೀಯ ಬಿಡ್ತಾರಾ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶಂಪೂರ ಪ್ರಶ್ನಿಸಿದ್ದಾರೆ. ಚಿಂಚೋಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೆ ಬಿಎಸ್‌ವೈ ಸಿಎಂ ಆಗೋದು ಹಗಲು ಕನಸು. 

ಮೈತ್ರಿ ಸರ್ಕಾರ ಸುಭದ್ರವಾಗಿದೆ. ಆದರೆ, ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಅವರು ಮೇ 23 ರ ನಂತರ ಸರ್ಕಾರ ಬಿದ್ದು ಹೋಗಲಿದೆ ಎಂದು ಹೇಳುತ್ತಾರೆ. ನಮ್ಮ ಸರ್ಕಾರ ಬಿದ್ದರೆ ನಾನು ರಾಜಕೀಯ ಬಿಟ್ಟು ಕೊಡುತ್ತೇನೆ, ಒಂದು ವೇಳೆ ಬೀಳದಿದ್ದರೆ ಅವರೆಲ್ಲರೂ ರಾಜಕೀಯ ಬಿಡುತ್ತಾರೇನು ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ರೈತರ 46 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಇಗಾಗಲೇ 3600 ಕೋಟಿ ವಿವಿಧ ಬ್ಯಾಂಕ್‌ಗಳಿಗೆ ಹಣ ಜಮೆ ಆಗಿದೆ ಎಂದೂ ಅವರು ಹೇಳಿದರು.